ಸಿಎಂ ಬೊಮ್ಮಾಯಿ ಗದರಿದ್ದೇ ಬಾಬುರಾವ್ ಚಿಂಚನಸೂರು ರಾಜೀನಾಮೆಗೆ ಕಾರಣ?
ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಗುಡ್ಬೈ ಹೇಳಿರೋ ಬಾಬುರಾವ್ ಚಿಂಚನಸೂರು ಹಲವು ಚರ್ಚೆಗಳನ್ನು ಹುಟ್ಟುಹಾಕಿದ್ದಾರೆ. ಆದ್ರೆ ಬಾಬುರಾವ್ ಚಿಂಚನಸೂರು ಪಕ್ಷ ಬಿಟ್ಟಿದ್ದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ವೇದಿಕೆ ಮೇಲೆಯೇ ಗದರಿದ್ದೇ ಕಾರಣವೆನ್ನಲಾಗ್ತಿದೆ.
ಜನವರಿ 24ರಂದು ದೇವಲ ಗಾಣಗಾಪುರದಲ್ಲಿ ನಡೆದಿದ್ದ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಭಾಷಣ ಮಾಡ್ತಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ್ದ ಬಾಬುರಾವ್ ಚಿಂಚನಸೂರು ಕೋಲಿ, ಕಬ್ಬಲಿಗ ಸಮಾಜಕ್ಕೆ ಎಸ್ಟಿ ಮೀಸಲಾತಿ ಕೊಡಬೇಕು ಅಂತಾ ಮನವಿ ಮಾಡಿದ್ದರು. ಈ ವೇಳೆ ಗರಂ ಆಗಿದ್ದ ಸಿಎಂ ಬೊಮ್ಮಾಯಿ, ನಾನು ಸಿಎಂ ಇದ್ದೇನೆ, ನನಗೆಲ್ಲಾ ಗೊತ್ತಿದೆ, ಸುಮ್ಮನೆ ಹೋಗಿ ಕೂತ್ಕಳಪ್ಪ ಅಂತಾ ತುಂಬಿದ ಸಭೆಯಲ್ಲೇ ಗದರಿದ್ದರು. ಇದೇ ಕಾರಣಕ್ಕೆ ಬೇಸರಗೊಂಡ ಚಿಂಚನಸೂರು ಬಿಜೆಪಿ ಹಾಗೂ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆನ್ನಲಾಗಿದೆ.
'ಮೊನ್ನೆ ತಾನೇ ಬಂದು ಕಾಲು ಹಿಡ್ಕೊಂಡಿದ್ರು'
ಇನ್ನು ಬಾಬುರಾವ್ ಚಿಂಚನಸೂರು ರಾಜೀನಾಮೆ ವಿಚಾರವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಮೊನ್ನೆ ತಾನೇ ಬಂದು ಗಂಡ ಹೆಂಡತಿ ಕಾಲು ಹಿಡ್ಕೊಂಡಿದ್ರು. ನಾನು ಎಲ್ಲೂ ಹೋಗಲ್ಲ ಅಂತ ಚಿಂಚನಸೂರು ಹೇಳಿದ್ರು. ಆದ್ರೀಗ ಬೇರೆ ಬೇರೆ ಒತ್ತಡಕ್ಕೆ ಮಣಿದು ಹೋಗಿರಬಹುದು. ಈಗ ಬಿಟ್ಟು ಹೋಗಿದ್ದಾರೆ, ಅದರ ಬಗ್ಗೆ ಯಾಕೆ ಚರ್ಚೆ ಅಂತಾ ಮಾರ್ಮಿಕವಾಗಿ ರಿಯಾಕ್ಟ್ ಮಾಡಿದ್ದಾರೆ.ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ