ಬಹುನಿರೀಕ್ಷಿತ ಕಬ್ಜ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಬಹುನಿರೀಕ್ಷಿತ ಕಬ್ಜ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಮುಖ ಪಾತ್ರದಲ್ಲಿ 'ಕಿಚ್ಚ' ಸುದೀಪ್ ಅಭಿನಯಿಸಿರುವ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ 'ಕಬ್ಜ' 2023ರ ಮಾ.17ರಂದು ತೆರೆಕಾಣಲಿದೆ.

ನಟ, ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನದಂದೇ ಚಿತ್ರ ರಿಲೀಸ್‌ ಮಾಡುವುದಕ್ಕೂ ಕಾರಣ ಇದೆ ಎಂದಿದ್ದಾರೆ ನಿರ್ದೇಶಕ ಆರ್‌.ಚಂದ್ರು.

'ನಾವು ಬಿಡುಗಡೆ ಮಾಡಿದ್ದ ಕಬ್ಜ ಚಿತ್ರದ ಮೊದಲ ಪೋಸ್ಟರ್‌ ನೋಡಿಯೇ ಪುನೀತ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೊತೆಗೆ ಚಿತ್ರೀಕರಣದ ಸೆಟ್‌ಗೂ ಭೇಟಿ ನೀಡಿದ್ದರು. ಈ ಚಿತ್ರಕ್ಕೆ ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ತಿಳಿಸಿದ್ದರು. ಈ ಎಲ್ಲ ಕಾರಣಗಳಿಂದ ಅವರ ಜನ್ಮದಿನದಂದೇ, ಅವರ ನೆನಪಿನಲ್ಲಿ, ಅಪ್ಪು ಅವರನ್ನು ಮತ್ತೆ ಮತ್ತೆ ಸಂಭ್ರಮಿಸಲು ಈ ದಿನಾಂಕವನ್ನು ಆಯ್ಕೆ ಮಾಡಿದೆವು.

ಇಂಟರ್ನೆಟ್ ಮೂವಿ ಡೇಟಾಬೇಸ್ (ಐಎಂಡಿಬಿ) ಬಿಡುಗಡೆ ಮಾಡಿರುವ 2023ರ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಕನ್ನಡದ ಏಕೈಕ ಸಿನಿಮಾವಿದ್ದು, ಅದು 'ಕಬ್ಜ' ಎನ್ನುವುದನ್ನು ಚಿತ್ರತಂಡ ಹೆಮ್ಮೆಯಿಂದ ಹೇಳಿಕೊಂಡಿದೆ. ಶ್ರೀ ಸಿದ್ಧೇಶ್ವರ ಎಂಟರ್‌ ಪ್ರೈಸಸ್‌ನಡಿ ನಿರ್ಮಾಣವಾಗಿರುವ ಈ ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.