ಭತ್ತದ ಹುಲ್ಲು ಸುಟ್ಟರೆ ಮಣ್ಣಿನ ಫಲವತ್ತತೆ ಹಾಳು: ವಿಜ್ಞಾನಿಗಳ ಎಚ್ಚರಿಕೆ

ಭತ್ತದ ಹುಲ್ಲು ಸುಟ್ಟರೆ ಮಣ್ಣಿನ ಫಲವತ್ತತೆ ಹಾಳು: ವಿಜ್ಞಾನಿಗಳ ಎಚ್ಚರಿಕೆ

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರು ಹಂಗಾಮಿನ ಭತ್ತ ನಾಟಿಗೆ ಸಿದ್ಧತೆ ನಡೆಯುತ್ತಿದ್ದು, ಇದರ ಮಧ್ಯೆ ಭತ್ತದ ಹುಲ್ಲು ಸುಡುತ್ತಿರುವುದು ಕಂಡು ಬರುತ್ತಿದೆ. ಮುಂಗಾರು ಹಂಗಾಮಿನ ಭತ್ತದ ಕೊಯ್ಲು ಮುಗಿದು ರೈತರಿಗೆ ಉತ್ತಮ ದರ ಸಿಗುತ್ತಿದೆ. ಇದರಿಂದ ಮತ್ತೊಂದು ಅವಧಿಯ ಭತ್ತ ನಾಟಿಗೆ ಸಸಿ ಮಡಿಗಳನ್ನು ಅಲ್ಲಲ್ಲಿ ಮಾಡಲಾಗಿದೆ. ಇದರ ಮಧ್ಯೆ ಭತ್ತದ ಕಟಾವು ಆಗಿರುವ ಗದ್ದೆಗಳಲ್ಲಿ ಬೆಂಕಿ ಹಚ್ಚಿ ‍ಪರಿಸರಕ್ಕೂ ಮಾಲಿನ್ಯ ಉಂಟುಮಾಡುವಂತ ಪ್ರಕ್ರಿಯೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದು ಕೊನೆಗಾಣಬೇಕು ಎನ್ನುವುದು ಕೃಷಿ ವಿಜ್ಞಾನ ಕೇಂದ್ರ