ತಿಲಕ ಇಟ್ಟು, ಹನುಮ ಮಾಲೆ ಧರಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ವ್ಯಕ್ತಿ

ತಿಲಕ ಇಟ್ಟು, ಹನುಮ ಮಾಲೆ ಧರಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ವ್ಯಕ್ತಿ

ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಧರ್ಮದಂಗಲ್ ಹೆಚ್ಚಾಗುತ್ತಿದ್ದು ಕೋಮು ಸೌಹಾರ್ಧತೆಗೆ ಧಕ್ಕೆ ಉಂಟಾಗುತ್ತಿದೆ. ಇಂಥ ಸಂದರ್ಭದಲ್ಲಿ ಮುಸ್ಲಿಂ ವ್ಯಕ್ತಿಯೋರ್ವ ಹನುಮ ಮಾಲಾ ಧಾರಣೆ ಮಾಡಿ ಕೋಮು ಸೌಹಾರ್ಧತೆ ಮೆರೆದಿದ್ದಾರೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾ|ನ ನರಸಲಗಹಿ ಗ್ರಾಮದ ಜಾಪರ್ ಬೆಣ್ಣಿ ಎಂಬ ವ್ಯಕ್ತಿ, ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಹನುಮ ಮಾಲಾ ವೃತಾರಣೆ ಮಾಡಿ ಸೋದರತೆ ಸಾರಿದ್ದಾರೆ. ಹಣೆಗೆ ತಿಲಕ ಇಟ್ಟು, ಹನುಮ ಮಾಲಾ ದೀಕ್ಷೆ ಪಡೆದಿರುವ ಜಾಪರ್ ಸಮಾಜಕ್ಕೆ ಮಾದರಿ.