2025ರ ವೇಳೆ ಶೇ58ರಷ್ಟು ಬೆಳೆಯಲಿದೆ ಬೆಂಗಳೂರು: ಸಮೀಕ್ಷೆ ವರದಿ

2025ರ ವೇಳೆ ಶೇ58ರಷ್ಟು ಬೆಳೆಯಲಿದೆ ಬೆಂಗಳೂರು: ಸಮೀಕ್ಷೆ ವರದಿ

ದಿನದಿಂದ ದಿನಕ್ಕೆ ನಿರೀಕ್ಷೆಗೂ ಮೀರಿ ಬೆಳೆಯುತ್ತಿರುವ ಬೆಂಗಳೂರು 2025ರ ಅಂತ್ಯದ ವೇಳೆ ಶೇ.58ರಷ್ಟು ಅಂದರೆ 1324 ಚದರ ಅಡಿ ಬೆಳೆಯಲಿದೆ ಎಂದು ಸಮೀಕ್ಷೆ ವರದಿ ತಿಳಿಸಿದೆ.

ಬೆಂಗಳೂರು ಬೆಳೆಯುತ್ತಿರುವ ರೀತಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಆಧಾರದ ಮೇಲೆ ನಡೆಸಿದ ಸಮೀಕ್ಷೆ ಪ್ರಕಾರ ಬೆಂಗಳೂರು 2017ಕ್ಕೆ ಹೋಲಿಸಿದರೆ ದುಪ್ಪಟ್ಟು ವೃದ್ಧಿಸಲಿದೆ.

2017ರಲ್ಲಿ ಬೆಂಗಳೂರು 7,27,88 ಚದರ ಅಡಿ ಅಂದರೆ ಶೇ.31.75ರಷ್ಟು ಬೆಂಗಳೂರು ವೃದ್ಧಿಸಿತ್ತು. ಇದೀಗ ಶೇ.58ರಷ್ಟು ವಿಸ್ತಾರಗೊಳ್ಳುವುದರಿಂದ ರಾಜ್ಯ ಸರಕಾರ ಕೂಡಲೇ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿ ಕುರಿತು ಚಿಂತನೆ ನಡೆಸಬೇಕಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 740 ಕಿ.ಮೀ. ಪ್ರದೇಶದಲ್ಲಿ ಕೂಡ ಬದಲಾವಣೆ ಆಗಿದ್ದು, 10 ಕಿ.ಮೀ. ಹೆಚ್ಚುವರಿ ಅಂದಾಜು ಭೂಮಿ ವಿಸ್ತಾರಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಒಳಚರಂಡಿ, ರಸ್ತೆ, ರಾಜಕಾಲುವೆ ಮುಂತಾದ ಮೂಲಭೂತ ಸೌಕರ್ಯಗಳ ಕುರಿತು ಗಮನ ಹರಿಸಬೇಕಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 2041ಕ್ಕೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದೆ. ಆದರೆ ಅದನ್ನೂ ಮೀರಿದ ವೇಗದಲ್ಲಿ ಬೆಂಗಳೂರು ಬೆಳೆಯುತ್ತಿದ್ದು, ಇದಕ್ಕಾಗಿ ಪೂರ್ವ ಸಿದ್ಧತೆಗಳು ಆಗಬೇಕಿದೆ.