ವಿಮಾನದಲ್ಲಿ ಮೂತ್ರ ವಿಸರ್ಜನೆ : ' Air India' ಗೆ 30 ಲಕ್ಷ ದಂಡ, ಪೈಲಟ್ ಪರವಾನಗಿ ಅಮಾನತುಗೊಳಿಸಿದ 'DGCA'
ನವದೆಹಲಿ : ನವದೆಹಲಿ -ವಿಮಾನದಲ್ಲಿ ನಡೆದ ಮೂತ್ರ ವಿಸರ್ಜನೆಯ ಘಟನೆ ಹಿನ್ನೆಲೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ 30 ಲಕ್ಷ ರೂ. ದಂಡ ವಿಧಿಸಿದ್ದು,ವಿಮಾನಯಾನ ನಿಯಂತ್ರಕವು ವಿಮಾನದ ಪೈಲಟ್-ಇನ್-ಕಮಾಂಡ್ ಪರವಾನಗಿಯನ್ನು ಮೂರು ತಿಂಗಳ ಅವಧಿಗೆ ಅಮಾನತುಗೊಳಿಸಿದೆ.
ನವೆಂಬರ್ 26, ರಂದು ಶಂಕರ್ ಮಿಶ್ರಾ ಎಂಬ ವ್ಯಕ್ತಿ ಕುಡಿದ ಅಮಲಿನಲ್ಲಿವಿಮಾನದ ಬಿಸಿನೆಸ್ ಕ್ಲಾಸ್ನಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ್ದ ಘಟನೆ ನಡೆದಿತ್ತು. ಸದ್ಯ ಶಂಕರ್ ಮಿಶ್ರಾ ಬಂಧನದಲ್ಲಿದ್ದಾರೆ.
ಈ ಸಂದರ್ಭದಲ್ಲಿ DGCA ಈ ಕೆಳಗಿನ ಕ್ರಮಗಳನ್ನು ತೆಗೆದುಕೊಂಡಿದೆ:
- DGCA ನಾಗರಿಕ ವಿಮಾನಯಾನ ಅಗತ್ಯತೆಗಳ ಉಲ್ಲಂಘನೆಗಾಗಿ ಏರ್ ಇಂಡಿಯಾಗೆ 30,00,000 ವಿಧಿಸಲಾಗಿದೆ.
- ವಿಮಾನ ನಿಯಮಗಳು, 1937 ರ ನಿಯಮ 141 ಮತ್ತು ಅನ್ವಯವಾಗುವ DGCA ನಾಗರಿಕ ವಿಮಾನಯಾನ ಅಗತ್ಯತೆಗಳ ಪ್ರಕಾರ ಮೂರು ತಿಂಗಳ ಅವಧಿಗೆ (03 ತಿಂಗಳುಗಳು) ಪೈಲಟ್-ಇನ್-ಕಮಾಂಡ್ನ ಪರವಾನಗಿ ಅಮಾನತು.
- DGCA ನಾಗರಿಕ ವಿಮಾನಯಾನ ಅಗತ್ಯತೆಗಳ ಪ್ರಕಾರ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ವಿಫಲವಾದ ಕಾರಣ ಏರ್ ಇಂಡಿಯಾದ ಡೈರೆಕ್ಟರ್-ಇನ್-ಫ್ಲೈಟ್ ಸೇವೆಗಳ ಮೇಲೆ 3,00,000 ವಿಧಿಸಲಾಗಿದೆ ಎಂದು ತಿಳಿಸಿದೆ.