ಶ್ರದ್ಧಾ ಫೋನ್ ಲಾಸ್ಟ್ ಲೊಕೇಶನ್ ಪತ್ತೆ : OLX ನಲ್ಲಿ ಅಫ್ತಾಬ್ ಫೋನ್ ಮಾರಾಟ

ಶ್ರದ್ಧಾ ಫೋನ್ ಲಾಸ್ಟ್ ಲೊಕೇಶನ್ ಪತ್ತೆ : OLX ನಲ್ಲಿ ಅಫ್ತಾಬ್ ಫೋನ್ ಮಾರಾಟ

ದೇಶವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ಧಾ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ. ದೆಹಲಿ ಪೊಲೀಸರು ಶ್ರದ್ಧಾ ಅವರ ಫೋನ್‌ನ ಸಿಡಿಆರ್ (ಕಾಲ್ ಡಿಟೇಲ್ ರೆಕಾರ್ಡ್) ವರದಿಯನ್ನು ಸಂಗ್ರಹಿಸಿದ್ದಾರೆ. ಅಲ್ಲದೆ, ಶ್ರದ್ಧಾ ಫೋನ್‌ನ ಕೊನೆಯ ಲೊಕೇಶನ್‌ ಮೇ 18 ಮತ್ತು 19 ರಂದು ಮೆಹ್ರೌಲಿಯ ಛತ್ತರ್‌ಪುರ ಎಂಬ ವಿಚಾರ ವರದಿಯಿಂದ ಬಹಿರಂಗವಾಗಿದೆ. ಮೇ 19ರ ರಾತ್ರಿ ಶ್ರದ್ಧಾ ಅವರ ಫೋನ್ ಸ್ವಿಚ್ ಆಫ್ ಆಗಿತ್ತು ಎಂಬ ವಿಚಾರ ಬಹಿರಂಗವಾಗಿದೆ.