ಮಹಿಳೆಯರು ಸಚಿವೆಯರಾಗಬಾರದು, ಅವರು ಮಕ್ಕಳಿಗೆ ಜನ್ಮ ನೀಡಬೇಕು: ತಾಲಿಬಾನ್

ಮಹಿಳೆಯರು ಸಚಿವೆಯರಾಗಬಾರದು, ಅವರು ಮಕ್ಕಳಿಗೆ ಜನ್ಮ ನೀಡಬೇಕು: ತಾಲಿಬಾನ್

ಬೆಂಗಳೂರು: ಮಹಿಳೆಯರು ರಾಜಕೀಯಕ್ಕೆ ಬರಬಾರದು, ಅವರು ಸಚಿವೆಯರಾಗಬಾರದು, ಮಕ್ಕಳಿಗೆ ಜನ್ಮ ನೀಡುತ್ತಿರಬೇಕು ಎಂದು ತಾಲಿಬಾನ್ ವಕ್ತಾರರೊಬ್ಬರು ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ತಾಲಿಬಾನ್ ವಕ್ತಾರ ಸೈಯದ್ ಝಕ್ರುಲ್ಲಾ ಹಶೀಮಿ, ಟೊಲೊ ನ್ಯೂಸ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಮಹಿಳೆ ಸಚಿವೆಯಾಗುವುದು ಸಾಧ್ಯವಿಲ್ಲ. ಅದು ಹೇಗಿರುತ್ತದೆಯೆಂದರೆ, ಹೊರಲಾಗದ ಭಾರವನ್ನು ಕುತ್ತಿಗೆಗೆ ಕಟ್ಟಿದಂತೆ. ಸಂಪುಟದಲ್ಲಿ ಮಹಿಳೆಯರು ಇರುವ ಅಗತ್ಯವಿಲ್ಲ. ಅವರು ಜನ್ಮ ನೀಡುತ್ತಿರಬೇಕು. ಮಹಿಳೆಯರ ಪ್ರತಿಭಟನೆ ಅಫ್ಗಾನಿಸ್ತಾನದಲ್ಲಿರುವ ಎಲ್ಲ ಮಹಿಳೆಯರನ್ನು ಪ್ರತಿನಿಧಿಸುವುದಿಲ್ಲ ಎಂದು ಸೈಯದ್ ಹೇಳಿಕೆ ನೀಡಿದ್ದಾರೆ.

ಮಹಿಳೆಯರು ಸಹಿತ ಅಫ್ಗನ್ ನಾಗರಿಕರು ಅಲ್ಲಿ ಯಾವುದೇ ಪ್ರತಿಭಟನೆ ನಡೆಸಲು ಪೂರ್ವಾನುಮತಿ ಪಡೆಯುವುದನ್ನು ತಾಲಿಬಾನ್ ಸರ್ಕಾರ ಕಡ್ಡಾಯ ಮಾಡಿದೆ.