ಗುಲಾಮ್ ನಬಿ ಆಜಾದ್ ಶೀಘ್ರ "ಘರ್ ವಾಪ್ಸಿ?

ಹೊಸದಿಲ್ಲಿ/ಶ್ರೀನಗರ: ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಆಜಾದ್ ಅವರು ಮತ್ತೆ ಕಾಂಗ್ರೆಸ್‌ಗೆ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹೆಸರು ಬಹಿರಂಗಪಡಿಸಲು ಇಚ್ಛಿಸಿದ ಕಾಂಗ್ರೆಸ್ ನಾಯಕ ರೊಬ್ಬರು ಮಾತನಾಡಿ, “ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು’ ಎಂದಿದ್ದಾರೆ.
ನಾಲ್ಕು ತಿಂಗಳ ಹಿಂದೆ ಕಾಂಗ್ರೆಸ್ ವರಿಷ್ಠರ ಧೋರಣೆಯನ್ನು ಖಂಡಿಸಿ ಪಕ್ಷ ತೊರೆದಿದ್ದರು. ಅನಂತರ ಅವರು ಡೆಮಾಕ್ರಾಟಿಕ್ ಆಜಾದ್ ಪಾರ್ಟಿ ಸ್ಥಾಪಿಸಿದ್ದರು.
ಆದರೆ ಆಜಾದ್ ಈ ಬಗೆಗಿನ ವರದಿಗಳು ಆಧಾರ ರಹಿತ ಎಂದಿದ್ದಾರೆ. ಕಾಂಗ್ರೆಸ್‌ಗೆ ತೆರಳುವ ಸಾಧ್ಯತೆ ಯನ್ನು ತಳ್ಳಿ ಹಾ ಕಿದ್ದಾರೆ.