57 ರನ್ ಗೆ 2 ವಿಕೆಟ್ ಕಳೆದುಕೊಂಡ ಭಾರತ : ಕಿವೀಸ್ ಮಾರಕ ದಾಳಿ
ಹುಬ್ಬಳ್ಳಿ : ಮೂರು ವರ್ಷಗಳ ಬಳಿಕ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ರೋಚಕ ಭಾರತ ಎ ಹಾಗೂ ನ್ಯೂಜಿಲೆಂಡ್ ಎ ತಂಡಗಳ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟಾಸ್ ಗೆದ್ದ ಕಿವೀಸ್ ಫಿಲ್ಡಿಂಗ್ ಆಯ್ದುಕೊಂಡಿತು.
ಉತ್ಸುಕತೆಯಿಂದ ಬ್ಯಾಟಿಂಗ್ ಇಳಿದ ಕೀವಿಸ್ ನ ಮಾರಕ ಬೌಲಿಂಗ್ ಗೆ ತತ್ತರಿಸಿದ ಪರಿಣಾಮ ಟೀಂ ಇಂಡಿಯಾ ಬ್ರೇಕಿಂಗ್ ವೇಳೆ ಅಷ್ಟರಲ್ಲಿ 17 ಓವರಗಳಲ್ಲಿ 2 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿದೆ.
ಭಾರತ ಎ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ 53 ಬಾಲ್ ಗಳಲ್ಲಿ 25 ರನ್ ಗಳಿಸಿ ಕ್ರೀಸ್ ನಲ್ಲಿ ಇದ್ದರೆ ಅಭಿಮನ್ಯು ಈಶ್ವರನ್ 37 ಬಾಲ್ ಗಳನ್ನು ಎದುರಿಸಿ 22 ರನ್ ವಿಕೆಟ್ ಒಪ್ಪಿಸಿದರೇ ಋತುರಾಜ್ ಗಾಯಕವಾಡ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇತರೆ 5 ಸೇರಿ ತಂಡದ ಮೊತ್ತ 57 ಕ್ಕೆ ತಲುಪಿದೆ.
ಇನ್ನೂ 9.30 ಕ್ಕೆ ಆರಂಭವಾಗಬೇಕಿದ್ದ ಪಂದ್ಯಾವಳಿ ಮೈದಾನ ತೇವಾಂಶ ಇರುವ ಹಿನ್ನಲೆಯಲ್ಲಿ 1 ಗಂಟೆ ತಡವಾಗಿ 10.30 ಆರಂಭಗೊಂಡಿತು. ಇದಲ್ಲದೇ ಕರ್ನಾಟಕದ ಪ್ರಸಿದ್ಧ ಕೃಷ್ಣ ಬದಲಿಗೆ ಮಹಾರಾಷ್ಟ್ರದ ಆಟಗಾರ ಶಾರ್ದೂಲ ಠಾಕೂರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.