ನೋಟು ಅಮಾನ್ಯ ಬಳಿಕವೂ ನಗದು ಚಲಾವಣೆ ಹೆಚ್ಚಳ: ಆರ್‌ಬಿಐ

ಕೇಂದ್ರದ ನೋಟು ರದ್ದತಿ ನಿರ್ಣಯದ 6ವರ್ಷಗಳ ಬಳಿಕವೂ ದೇಶದಲ್ಲಿ ನಗದು ಚಲಾವಣೆಯೇ ಮುಂಚೂಣಿಯಲ್ಲಿದ್ದು, ಈ 6 ವರ್ಷದಲ್ಲಿ ನಗದು ಬಳಕೆಯ ಪ್ರಮಾಣ ಶೇ. 83ಕ್ಕೆ ಏರಿಕೆಯಾಗಿದೆ ಎಂದು RBI ತಿಳಿಸಿದೆ. ಈ ಕುರಿತ ದತ್ತಾಂಶಗಳನ್ನು RBI ಬಿಡುಗಡೆ ಗೊಳಿಸಿದ್ದು, 2016ರ ನ. 4ರ ಸಮಯಕ್ಕೆ ದೇಶದಲ್ಲಿ 17.74 ಲಕ್ಷ ಕೋಟಿ ರೂ. ನಗದು ಚಲಾವಣೆಯಲ್ಲಿತ್ತು. ಈಗ ಈ ಮೌಲ್ಯ ದ್ವಿಗುಣಗೊಂಡಿದ್ದು, 2022ರ ಡಿ. 23ರ ವೇಳೆಗೆ 32.42 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ ಎಂದು ತಿಳಿಸಿದೆ.