ಅವಳಿ ಕರುಗಳಿಗೆ ತೊಟ್ಟಿಲೋತ್ಸವ; ನಾಮಕರಣ ಮಾಡಿ ಸಂಭ್ರಮಿಸಿದ ಭಕ್ತರು

ಅವಳಿ ಕರುಗಳಿಗೆ ತೊಟ್ಟಿಲೋತ್ಸವ; ನಾಮಕರಣ ಮಾಡಿ ಸಂಭ್ರಮಿಸಿದ ಭಕ್ತರು

ಬಾಗಲಕೋಟೆ: ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ತ್ರಯಂಬಕೇಶ್ವರ ದೇವಸ್ಥಾನದ ದನ ಅವಳಿ ಗಂಡು ಕರುಗಳಿಗೆ ಜನ್ಮ ನೀಡಿತ್ತು. ಇದೀಗ ಅವಳಿ ಕರುಗಳಿಗೆ ನಾಮಕರಣ ಮಾಡಲಾಗಿದೆ. ಭಕ್ತರು ಅವಳಿ ಕರುಗಳಿಗೆ ತೊಟ್ಟಿಲೋತ್ಸವ ಮಾಡಿ ಸಂಭ್ರಮಿಸಿದ್ದಾರೆ.

ಸೇರಿದ್ದ ನೂರಾರು ಭಕ್ತರು ಅವಳಿ ಕರುಗಳನ್ನು ತೊಟ್ಟಿಲಲ್ಲಿ ಹಾಕಿ ತೂಗಿದ್ದಾರೆ.

ನಂತರ ನಾಮಕರಣ ಮಾಡಿ ರಾಮ - ಲಕ್ಷ್ಮಣ ಎಂದು ಹೆಸರಿಟ್ಟಿದ್ದಾರೆ. ದೇವಸ್ಥಾನಕ್ಕೆಂದು ಬಿಟ್ಟಿದ್ದ ಆಕಳು, ಐದು ದಿನಗಳ ಹಿಂದೆ ಅವಳಿ ಕರುಗಳಿಗೆ ಜನ್ಮ ನೀಡಿತ್ತು. ಇದೀಗ ಭಕ್ತರು ಅದ್ಧೂರಿಯಾಗಿ ತೊಟ್ಟಿಲ ಕಾರ್ಯ ಮಾಡಿದ್ದಾರೆ. ನಾಮಕರಣಕ್ಕೆ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತು.