ಇಂದಿನಿಂದ ಮೂರು ದಿನಗಳ ಕಾಲ ವಾಯವ್ಯ ರಾಜ್ಯಗಳಲ್ಲಿ ತೀವ್ರ ಶೀತ ಅಲೆ

ಇಂದಿನಿಂದ ಮೂರು ದಿನಗಳ ಕಾಲ ವಾಯವ್ಯ ರಾಜ್ಯಗಳಲ್ಲಿ ತೀವ್ರ ಶೀತ ಅಲೆ

ನವದೆಹಲಿ: ಸೋಮವಾರ & ಬುಧವಾರದ ನಡುವೆ ದೆಹಲಿ-ಎನ್‌‌ಸಿಆರ್‌‌‌‌ನ ಹಲವೆಡೆ ತೀವ್ರ ಶೀತ ಅಲೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕನಿಷ್ಠ ತಾಪಮಾನ 3 ಡಿಗ್ರಿ ಸೆಲ್ಸಿಯಸ್‌‌‌ನಲ್ಲಿ ನೆಲೆಗೊಳ್ಳುವ ನಿರೀಕ್ಷೆ ಇದೆ. ಮುಂದಿನ 5 ದಿನಗಳಲ್ಲಿ ಪಂಜಾಬ್‌‌, ಹರಿಯಾಣ, ದೆಹಲಿ & ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ದಟ್ಟವಾದ ಮಂಜು ಇರುತ್ತದೆ. ಜ.17-18ರವರೆಗೆ ವಾಯುವ್ಯ & ಮಧ್ಯ ಭಾರತದ ಹಲವು ಭಾಗಗಳಲ್ಲಿ ಕನಿಷ್ಠ ತಾಪಮಾನ 2 ಡಿಗ್ರಿ ಸೆಲ್ಸಿಯಸ್‌‌‌‌ನಷ್ಟು ಕುಸಿಯುವ ಸಾಧ್ಯತೆ ಇದೆ.