ಹೊಸ ವರ್ಷಾಚರಣೆ ವೇಳೆ ಭಯೋತ್ಪಾದಕ ಚಟುವಟಿಕೆ ಶಂಕೆ ಹಿನ್ನೆಲೆ

ಹೊಸ ವರ್ಷಾಚರಣೆ ವೇಳೆ ಭಯೋತ್ಪಾದಕ ಚಟುವಟಿಕೆ ಶಂಕೆ ಹಿನ್ನೆಲೆ

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಭಯೋತ್ಪಾದಕ ಚಟುವಟಿಕೆ ಶಂಕೆ ಹಿನ್ನೆಲೆಯಲ್ಲಿ ಹೊಸ ವರ್ಷಕ್ಕೆ ಬಿಗಿ ಬಂದೋಬಸ್ತ್‌ ಮಾಡಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮಂಗಳೂರು ಮತ್ತು ಕೊಯಮತ್ತೂರಿನಲ್ಲಿ ಬಾಂಬ್‌ ಬ್ಲಾಸ್ಟ್‌ ಆಗಿತ್ತು. ಈ ಹಿನ್ನೆಲೆ ಬೆಂಗಳೂರು ಪೊಲೀಸರಿಗೆ ಅಲರ್ಟ್‌ ಇರುವಂತೆ ಸೂಚನೆ ನೀಡಿದ್ದೇವೆ ಎಂದು ಹೇಳಿದ್ದಾರೆ.

ಕಳೆದ ಎರಡು ವರ್ಷ ಕೊರೊನಾದಿಂದ ಹೊಸ ವರ್ಷ ಆಚರಣೆಗೆ ಬ್ರೇಕ್‌ ಬಿದ್ದಿತ್ತು. ಈ ಬಾರಿ ಹೊಸ ಹೊಸವರ್ಷಾಚರಣೆಗೆ ಅನುಮತಿ ನೀಡಲಾಗಿತ್ತು. ಹೀಗಾಗಿ ಹೊಸ ವರ್ಷ ಬರಮಾಡಿಕೊಳ್ಳುವುದಕ್ಕೆ ಬೆಂಗಳೂರು ಜನರು ಕಾತುರದಿಂದ ಕಾಯುತ್ತಿದ್ದರು.

ಆದರೆ ಚೀನಾದಲ್ಲಿ ಕೊರೊನಾ ಹೊಸ ತಳಿ BF.7 ಸೋಂಕು ಕಾಣಿಸಿಕೊಂಡಿದ್ದರಿಂದ ಕರ್ನಾಟಕದಲ್ಲಿ ಹರಡುವ ಭೀತಿ ಹೆಚ್ಚಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಹೊಸ ವರ್ಷಕ್ಕೆ ಹೊಸ ಗೈಡ್‌ ಲೈನ್ಸ್‌ ಹೊರಡಿಸಲಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಮಾಹಿತಿ ನೀಡಲಿದ್ದಾರೆ.