ನವನಗರದಲ್ಲಿ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ
ಹುಬ್ಬಳ್ಳಿಯ ನವನಗರದಲ್ಲಿ ಅಕ್ರಮವಾಗಿ ಸರ್ಕಾರಿ ಜಾಗದಲ್ಲಿ ಹಾಕಲಾಗಿದ್ದ ಗೂಡಂಗಡಿಗಳನ್ನು ಪಾಲಿಕೆಯ ಅಧಿಕಾರಿಗಳು ಇಂದು ತೆರವು ಮಾಡಿಸುವ ಕಾರ್ಯಾಚರಣೆಗೆ ಇಳಿದ್ದಿದರು.
ನವನಗರ ಪೊಲೀಸ್ ಠಾಣಾ ಹಿಂಬಾಗದಲ್ಲಿದ್ದ ಸರ್ಕಾರಿ ಜಾಗದಲ್ಲಿ ಹಲವು ವರ್ಷಗಳಿಂದ ಗುಜರಿ ಅಂಗಡಿಗಳನ್ನು ಹಲವು ಜನರು ನಡೆಸುತ್ತಿದ್ದರು,ಈ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು ಸಾಕಷ್ಟು ಬಾರಿ ಅಂಗಡಿಕಾರರಿಗೆ ನೋಟಿಸ್ ನೀಡಿದ್ದರೂ ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ ಇಂದು ನವನಗರ ವಲಯ ಕಚೇರಿಯ ಉಪ ಆಯುಕ್ತರ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಅನಧಿಕೃತವಾಗಿ ಇದ್ದ ಗುಜರಿ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ಅಷ್ಟೇ ಅಲ್ಲದೆ ಪಾಲಿಕೆಯ ಈ ಕಾರ್ಯಕ್ಕೆ ಸಾರ್ವಜನಿಕರು ಕೂಡಾ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಈ ರೀತಿಯಾಗಿ ಅನಧಿಕೃತ ಅಂಗಡಿ ತೆರವು ಮಾಡಿರುವುದರಿಂದ ನವನಗರದ ಹೃದಯ ಭಾಗ ಇದೀಗ ಸುಂದರವಾಗಿದ್ದು ವಲಯ ಕಚೇರಿಯ ಅಧಿಕಾರಿಗಳ ಕಾರ್ಯಕ್ಕೆ ನಮಗೆ ಮೆಚ್ಚುಗೆ ಇದೆ ಅಂತಾ ಮಾಧ್ಯಮಕ್ಕೆ ತಮ್ಮ ಅಭಿಪ್ರಾಯ ತಿಳಿಸಿದ್ರು