ಬೆಂಗಳೂರಿನಲ್ಲಿ ಸರಣಿ ಅಪಘಾತ, ಓರ್ವ ವ್ಯಕ್ತಿ ಸಾವು: 2 ಕಾರು, 1 ಆಟೋ, 1 ಟಾಟಾ ಏಸ್ ಮಧ್ಯೆ ಡಿಕ್ಕಿ

ಬೆಂಗಳೂರಿನಲ್ಲಿ ಸರಣಿ ಅಪಘಾತ, ಓರ್ವ ವ್ಯಕ್ತಿ ಸಾವು: 2 ಕಾರು, 1 ಆಟೋ, 1 ಟಾಟಾ ಏಸ್ ಮಧ್ಯೆ ಡಿಕ್ಕಿ

ಬೆಂಗಳೂರು: ಅತಿ ವೇಗದಿಂದ ಬಂದಂತ ಬೆಂಜ್ ಕಾರೊಂದು ನಿಯಂತ್ರಣ ತಪ್ಪಿ, ಸರಣಿ ಅಪಘಾತದಿಂದಾಗಿ ( Accident ) ಓರ್ವ ವ್ಯಕ್ತಿ ಮೃತಪಟ್ಟು, ಹಲವು ಜನರು ಗಾಯಗೊಂಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಹಲಸೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಂದಿತಾ ಚೌಧರಿ ಎಂಬುವರಿಗೆ ಸೇರಿದಂತ ಬೆಂಜ್ ಕಾರೊಂದು ಡಿಕ್ಕಿಯಾಗಿ ಸರಣಿ ಅಪಘಾತವೇ ಉಂಟಾಗಿದೆ.ಸರಣಿ ಅಪಘಾತದಿಂದಾಗಿ 2 ಕಾರು, 1 ಆಟೋ, 1 ಟಾಟಾ ಏಸ್ ವಾಹನಗಳು ಹಾನಿಕೊಂಡಿವೆ. ಅತಿ ವೇಗದ ಚಾಲನೆಯೇ ಸರಣಿ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಓವರ್ ಸ್ಪೀಡ್ ಆಗಿ ಬಂದಂತ ಬೆಂಜ್ ಕಾರು ಡಿಕ್ಕಿಯಾಗಿ ಎನ್ನಲಾಗಿದೆ. ಬೆಂಜ್ ಕಾರಂತೂ ಅಪಘಾತದಲ್ಲಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಸಂಬಂಧ ಹಲಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.