ವೃತ್ತಿ ಜೀವನದ ಕೊನೆಯ ಆಟದಲ್ಲಿ ಸಾನಿಯಾಗೆ ಸೋಲು: ಕಣ್ಣೀರಾದ ಮೂಗುತಿ ಸುಂದರಿ

ವೃತ್ತಿ ಜೀವನದ ಕೊನೆಯ ಆಟದಲ್ಲಿ ಸಾನಿಯಾಗೆ ಸೋಲು: ಕಣ್ಣೀರಾದ ಮೂಗುತಿ ಸುಂದರಿ

ಸ್ಟ್ರೇಲಿಯಾ: ಆಸ್ಟ್ರೇಲಿಯನ್ ಓಪನ್‌ ಟೂರ್ನಿ ತಮ್ಮ ವೃತ್ತಿ ಜೀವನದ ಕೊನೆಯ ಗ್ರ್ಯಾಂಡ್‌ ಸ್ಲಾಂ ಟೂರ್ನಿ ಎಂದು ಸಾನಿಯಾ ಮಿರ್ಜಾ ಈಗಾಗಲೇ ಘೋಷಣೆ ಮಾಡಿದ್ದರು. ಆದರೆ ಕೊನೆಯ ಗ್ರ್ಯಾಂಡ್‌ ಸ್ಲಾಂನಲ್ಲಿ ಸೋಲು ಕಂಡಿದ್ದು ದುಃಖ ತಡೆಯಲು ಆಗದೇ ಬಹಳ ಕಣ್ಣೀರು ಹಾಕಿದ್ದು ಅದರ ವಿಡಿಯೋ ವೈರಲ್​ ಆಗಿದೆ.

ಮಿಶ್ರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಸಾನಿಯಾ ಮತ್ತು ರೋಹನ್ ಬೋಪಣ್ಣ ಜೋಡಿ 6-7, 6-2 ಸೆಟ್‌ಗಳಿಂದ ಸೋತರು. ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ 2ನೇ ಸುತ್ತಿನಲ್ಲಿಯೇ ಸೋಲು ಕಂಡು ನಿರಾಸೆ ಎದುರಿಸಿದ್ದ ಸಾನಿಯಾ ಮಿರ್ಜಾ, ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಫೈನಲ್‌ಗೇರುವ ಮೂಲಕ ಪ್ರಶಸ್ತಿಯ ನಿರೀಕ್ಷೆ ಇಟ್ಟಿದ್ದರು. ತಮ್ಮ ಕೊನೆಯ ಆಟವಾಗಿದ್ದರಿಂದ ಇವರ ನಿರೀಕ್ಷೆ ಸಹಜವಾಗಿತ್ತು.

ಆದರೆ ಒಂದೆಡೆ ಅಂತಿಮ ಆಟ, ಇನ್ನೊಂದೆಡೆ ಸೋಲು ಇದರಿಂದ ನೋವು ಸಹಿಸಲು ಸಾಧ್ಯವಾಗದೇ ಕಣ್ಣೀರು ಸುರಿಸಿದ್ದಾರೆ. ಫೈನಲ್‌ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಹಾಗೂ ರೋಹನ್‌ ಬೋಪಣ್ಣ ಜೋಡಿ 6-7. 2-6 ರಿಂದ ಬ್ರೆಜಿಲ್‌ ಜೋಡಿ ಲೂಯಿಸಾ ಸ್ಟೆಫಾನಿ ಹಾಗೂ ರಾಫೆಲ್‌ ಮಾಟೋಸ್‌ ಜೋಡಿಗೆ ಶರಣಾಯಿತು.