ಮಠ ಸಿನಿಮಾದ ಟ್ರೈಲರ್ ಲಾಂಚ್ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ ಅಶ್ವಿನಿ ಪುನೀತ್​ರಾಜ್​ಕುಮಾರ್.!

ಮಠ ಸಿನಿಮಾದ ಟ್ರೈಲರ್ ಲಾಂಚ್ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ ಅಶ್ವಿನಿ ಪುನೀತ್​ರಾಜ್​ಕುಮಾರ್.!

ಬೆಂಗಳೂರು : ಅಶ್ವಿನಿ ಪುನೀತ್ ​ರಾಜ್​ಕುಮಾರ್ ಅವರು ಮಠ ಸಿನಿಮಾದ ಟ್ರೈಲರ್ ಲಾಂಚ್ ಮಾಡಿದ್ದಾರೆ. ರವೀಂದ್ರ ವಂಶಿ ನಿರ್ದೇಶನದ ರಮೇಶ್ ನಿರ್ಮಾಣದ ಮಠ ಸಿನಿಮಾ ಇದಾಗಿದೆ. ಅಶ್ವಿನಿ ಮಠ ಸಿನಿಮಾದ ಟ್ರೇಲರ್ ನೋಡಿ ಶುಭಹಾರೈಸಿದ್ದಾರೆ.

ಮಠ ನೈಜ ಘಟನೆ ಆಧಾರಿತ ಸಿನಿಮಾವಾಗಿದ್ದು, ಈ ಹಿಂದೆ ಗುರುಪ್ರಸಾದ್ ಸಾರಥ್ಯದಲ್ಲಿ ಮೂಡಿಬಂದಿದ ಮಠ ಟೈಟಲ್ ನಲ್ಲಿ ಹೊಸ ಸಿನಿಮಾ ಬಂದಿದೆ. ಹೊಸ ಮಠ ಸಿನಿಮಾ ಟ್ರೇಲರ್ ಮೂಲಕ ಎಲ್ಲರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾದಲ್ಲಿ ಗುರುಪ್ರಸಾದ್, ಸಾಧುಕೋಕಿಲಾ, ಶರತ್ ಲೋಹಿತಾಶ್ವ, ಬೀರಾದರ್, ರಮೇಶ್ ಭಟ್, ಬ್ಯಾಂಕ್ ಜನಾರ್ಧನ್, ಗಿರಿ, ಮೂಗು ಸುರೇಶ್, ರಾಜು ತಾಳಿಕೋಟೆ ನಟಿಸಿದ್ದಾರೆ. ಶ್ರೀಗುರು ಸಂಗೀತ ಸಂಯೋಜನೆಯಿದ್ದು, ವಿ ಮನೋಹರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.