ಕೋವಿಡ್ ನಿಂದ ಮೃತಪಟ್ಟ 36 ಮಂದಿಯ ಕುಟುಂಬದವರಿಗೆ ಸರ್ಕಾರಿ ಕೆಲಸ : ಡಿಕೆಶಿ ಘೋಷಣೆ
ಬೆಂಗಳೂರು : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಚಾಮರಾಜನಗರದಲ್ಲಿ ಕೋವಿಡ್ ನಿಂದ ಮೃತಪಟ್ಟ 36 ಕುಟುಂಬಗಳಲ್ಲಿ ತಲಾ ಒಬ್ಬರಿಗೆ ಸರ್ಕಾರಿ ಕೆಲಸ ಕೊಡ್ತೇವೆ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಡಿಕೆ ಶಿವಕುಮಾರ್ ಆಕ್ಸಿಜನ್ ನೀಡದೇ ಸಚಿವ ಸುಧಾಕರ್ 36 ಜನರ ಸಾವಿಗೆ ಕಾರಣರಾಗಿದ್ದಾರೆ, ಇದಕ್ಕೆ ಸುಧಾಕರ್ ನೇರ ಹೊಣೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ಧಾಳಿ ನಡೆಸಿದ್ದಾರೆ.
ಕೋವಿಡ್ ವೇಳೆ ಸಚಿವ ಸುಧಾಕರ್ ಆಕ್ಸಿಜನ್ ಕೊಡದೇ 36 ಜನರನ್ನ ಕೊಲೆ ಮಾಡಿದ್ದಾರೆ. ಅವರು ಮೃತಪಟ್ಟಿದ್ದಲ್ಲ ಅದು ಕೊಲೆ ಎಂದು ವಾಗ್ಧಾಳಿ ನಡೆಸಿದ್ದಾರೆ. ಇದುವರೆಗೆ ಯಾವ ಮಂತ್ರಿಯೂ ಕೂಡ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲಿಲ್ಲ.. ನಾವು ಸಂತ್ರಸ್ತರ ಮನೆಗೆ ಹೋಗಿ 1 ಲಕ್ಷ ರೂಪಾಯಿ ಕೊಟ್ಟೆವು. ಈ ಬಾರಿ ನಮ್ಮ ಸರ್ಕಾರ ಬಂದರೆ ಕೋವಿಡ್ ನಿಂದ ಮೃತಪಟ್ಟ 36 ಕುಟುಂಬಗಳಲ್ಲಿ ತಲಾ ಒಬ್ಬರಿಗೆ ಸರ್ಕಾರಿ ಕೆಲಸ ಕೊಡ್ತೇವೆ ಎಂದು ಭರವಸೆ ನೀಡಿದ್ದಾರೆ. ಕಾಂಗ್ರೆಸ್ 150 ಸೀಟು ಗೆಲ್ಲುತ್ತೆ , ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.