ಬಾಗಲಕೋಟೆಯಲ್ಲಿ ದಲಿತರ ಮನೆಯಲ್ಲಿ ಊಟ ಸವಿದ ಆರ್.‌ ಅಶೋಕ್:‌ ಪ್ರತಿ ಕುಟುಂಬಕ್ಕೆ ವೈಯಕ್ತಿವಾಗಿ 2 ಲಕ್ಷ ರೂ.

ಬಾಗಲಕೋಟೆಯಲ್ಲಿ ದಲಿತರ ಮನೆಯಲ್ಲಿ ಊಟ ಸವಿದ ಆರ್.‌ ಅಶೋಕ್:‌ ಪ್ರತಿ ಕುಟುಂಬಕ್ಕೆ ವೈಯಕ್ತಿವಾಗಿ 2 ಲಕ್ಷ ರೂ.

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಬೀಳಗಿ ವಿಧಾನಸಭೆ ಕ್ಷೇತ್ರದ ಕಲಾದಗಿ ಗ್ರಾಮದ ಕಲ್ಲೊಳ್ಳೆಪ್ಪ ಮಾದರ ಮನೆಯಲ್ಲಿ ಆರ್‌ ಅಶೋಕ್‌ ವಾಸ್ತವ್ಯ ಹೂಡಿದ್ದಾರೆ.

ಜೊತೆಗೆ ಅವರ ಮನೆಯಲ್ಲಿ ಊಟ, ಉಪಹಾರ ಸೇವಿಸಿದ್ದಾರೆ.

ಈಗಾಗಲೇ ಅವರು ರಾಜ್ಯದ ಹಲವು ಜಲ್ಲೆಗಳಲ್ಲಿ ವಾಸ್ತವ್ಯ ಹೂಡಿ ಬಂದಿದ್ದಾರೆ. ಇದೀಗ ಕಲ್ಲೊಳ್ಳೆಪ್ಪ ಮಾದರ ಮನೆಯಲ್ಲಿ ಬಿಸಿ ಬಿಸಿ ರೊಟ್ಟಿ, ಪಲ್ಲೆ, ಮೊಸರು ಚಟ್ನಿ, ಉಪ್ಪಿಟ್ಟು ಚುರುಮುರಿ, ಮೊಸರ ಅವಲಕ್ಕಿ ಸವಿದಿದ್ದಾರೆ. ಕ್ಷೇತ್ರದ ಶಾಸಕ, ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಪರಿಷತ್ ಸದಸ್ಯ ಹನಮಂತ ನಿರಾಣಿ, ಉಪ ವಿಭಾಧಿಕಾರಿ ಶ್ವೇತಾ ಬೀಡಿಕರ ಸಚಿವರಿಗೆ ಬೆಂಬಲ ಸೂಚಿಸಿದ್ದಾರೆ.

ನಂತರ ಮಾತನಾಡಿದ ಅವರು, ಬಡವರ ಮನೆ ಊಟದ ಸವಿ ಹೆಚ್ಚು. ಇಲ್ಲಿ ಪ್ರೀತಿಯಿಂದ ನಮಗೆ ಊಟ-ಉಪಹಾರ ಕೊಟ್ಟಿದ್ದಾರೆ. ಇದೆಲ್ಲ ಗ್ರಾಮವಾಸ್ತವ್ಯದದ ಸಾಧ್ಯವಾಗಿದೆ. ಪ್ರತಿಯೊಬ್ಬ ರಾಜಕಾರಣಿಯೂ ಈ ರೀತಿ ಕಾರ್ಯಕ್ರಮ ಮಾಡಬೇಕು. ಜನರ ಬಳಿ ಹೋದಾಗಲೇ ಅವರ ಸಮಸ್ಯೆಗಳು ತಿಳಿಯಲು ಸಾಧ್ಯ. ಇನ್ನು ಕಲ್ಲೊಳ್ಳೆಪ್ಪ ಮಾದರ ಕುಟುಂಬಕ್ಕೆ ವೈಯಕ್ತಿವಾಗಿ ಎರಡು ಲಕ್ಷ ರೂ. ಕೊಡೋದಾಗಿ ಹೇಳಿದ್ದಾರೆ.