ಬೀದಿ ನಾಯಿಗಳನ್ನು ಕೊಲ್ಲಬೇಕು ಪ್ರತಾಪ್ ಸಿಂಹ ಹೇಳಿಕೆ ವಿಚಾರ : ಸಿಟ್ಟಿಗೆದ್ದ ಪ್ರಾಣಿ ಪ್ರಿಯರು

ಬೀದಿ ನಾಯಿಗಳನ್ನು ಕೊಲ್ಲಬೇಕು ಪ್ರತಾಪ್ ಸಿಂಹ ಹೇಳಿಕೆ ವಿಚಾರ : ಸಿಟ್ಟಿಗೆದ್ದ ಪ್ರಾಣಿ ಪ್ರಿಯರು

ಮೈಸೂರು : ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ತಡೆಗಟ್ಟಲು ಬೀದಿ ನಾಯಿಗಳನ್ನುಕರುಣೆಯಿಲ್ಲದೆ ಕೊಲ್ಲಬೇಕುಮೈಸೂರು - ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿಚಾರ ಇದೀಗ ಪ್ರಾಣಿ ಪ್ರಿಯರು ಸಿಟ್ಟಿಗೆದ್ದ ಹೋರಾಟಕ್ಕೆ ಮುಂದಾಗಿದ್ದಾರೆ.

ಇತ್ತೀಚೆಗೆ ಹೈದರಾಬಾದ್ ಘಟನೆಯನ್ನು ಉಲ್ಲೇಖಿಸಿ ಮಾತನಾಡಿದ್ದಮೈಸೂರು - ಕೊಡಗು ಸಂಸದ ಪ್ರತಾಪ್ ಸಿಂಹ ಬೀದಿ ನಾಯಿಗಳ ಸಮಸ್ಯೆಯನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳಲು ನಮಗೆ ಅವಕಾಶ ಮಾಡಿಕೊಡಿ. ಅವುಗಳನ್ನು ಕನಿಕರವಿಲ್ಲದೆ ಕೊಲ್ಲಬೇಕು ಎಂದಿದ್ದರು. ಈ ವಿಚಾರವೂ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಪ್ರಾಣಿ ಪ್ರಿಯರಾದ ನಟಿ ಸಂಯುಕ್ತ ಹೊರನಾಡು ಕಿಡಿಕಾರಿದ್ದು, ಸಂಸದ ಪ್ರತಾಪ್ ಸಿಂಹ ಅವರ ಹೇಳಿಯನ್ನು ಖಂಡಿಸುತ್ತೇನೆ. ಕಾನೂನಿನ ಪ್ರಕಾರವಾಗಿ, ಭಾರತದಲ್ಲಿ ನಾಯಿಗಳನ್ನು ನಿಯಂತ್ರಣದಲ್ಲಿಡಲು ಅತ್ಯಂತ ಮಾನವೀಯ ಮಾರ್ಗವೆಂದರೆ ಅವುಗಳಿಗೆ ಸಂತಾನಹರಣ ಮಾಡುವುದು ಮತ್ತು ಲಸಿಕೆ ಹಾಕುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಕೊಲ್ಲುವುದು ಕಾನೂನುಬಾಹಿರವಾಗಿದೆ. ಬೇರೆ ಯಾರಾದರೂ ಇಂತಹ ಹೇಳಿಕೆಗಳನ್ನು ನೀಡಬಾರದು ಎಂದಿದ್ದಾರೆ.

ಇಷ್ಟೇ ಅಲ್ಲ ಪ್ರಾಣಿ ಹಕ್ಕುಗಳ ಹೋರಾಟಗಾರ ಅರುಣ್ ಪ್ರಸಾದ್, ಸಂಯುಕ್ತ ಹೊರನಾಡು ಅವರನ್ನು ಬೆಂಬಲಿಸಿದ್ದಾರೆ. ಡಾಗ್ ರೂಲ್ಸ್ 2001 ಗೆಜೆಟ್ ನೋಟಿಫಿಕೇಶನ್ ಮತ್ತು ಎಸ್‌ಎಲ್‌ಪಿ 691/2009 ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಅಡಿಯಲ್ಲಿ ಪ್ರಾಣಿಗಳನ್ನು ಕೊಲ್ಲುವುದು ಕಾನೂನುಬಾಹಿರವಾಗಿದೆ ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ.