IND vs NZ 1st Test, Day 2 LIVE Score: 345 ರನ್​ಗಳಿಗೆ ಭಾರತದ ಮೊದಲ ಇನ್ನಿಂಗ್ಸ್ ಮುಕ್ತಾಯ

IND vs NZ 1st Test, Day 2 LIVE Score: 345 ರನ್​ಗಳಿಗೆ ಭಾರತದ ಮೊದಲ ಇನ್ನಿಂಗ್ಸ್ ಮುಕ್ತಾಯ
India vs New Zealand 1st Test Day 1 Live Score Updates: ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡು 258 ರನ್‌ ಗಳಿಸಿದ್ದ ಭಾರತ ಈಗ ಎರಡನೇ ದಿನದಾಟ ಆರಂಭಿಸಿದೆ. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಜವಾಬ್ದಾರಿಯುತ ಬ್ಯಾಟ್‌ ಮಾಡಿ ತಂಡವನ್ನು ಅಪಾಯದಿಂದ ಪಾರು ಮಾಡಿದ ಶ್ರೇಯಸ್ ಅಯ್ಯರ್‌ ಶತಕ ಸಿಡಿಸಿ ಔಟ್ ಆಗಿದ್ದಾರೆ.

IND vs NZ 1st Test, Day 2 LIVE Score: ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರು ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸಾಕಷ್ಟು ಕುತೂಹಲದಿಂದ ಕೂಡಿದ್ದ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿತು. ಆರಂಭಿಕರ ಬ್ಯಾಟರ್​ಗಳ ವೈಫಲ್ಯದ ಹೊರತಾಗಿಯೂ ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜಾ ಅವರ ಜೊತೆಯಾಟದ ನೆರವಿನಿಂದ ಭಾರತ ಉತ್ತಮ ಮೊತ್ತ ಸಂಪಾದಿಸಿತು. ಮೊದಲ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್‌ ಕಳೆದುಕೊಂಡು 258 ರನ್‌ ಗಳಿಸಿದ್ದ ಭಾರತ ಈಗ ಎರಡನೇ ದಿನದಾಟದಲ್ಲಿ ಬೇಗನೆ ವಿಕೆಟ್ ಕಳೆದುಕೊಳ್ಳುತ್ತಿದೆ. ಶ್ರೇಯಸ್ ಅಯ್ಯರ್ ಚೊಚ್ಚಲ ಶತಕ ಸಿಡಿಸಿ ಔಟ್ ಆಗಿದ್ದಾರೆ.

ಸ್ಕೋರು ವಿವರ ಮೊದಲ ದಿನದಾಟದ ಅಂತ್ಯಕ್ಕೆ:

ಭಾರತ ಮೊದಲ ಇನ್ನಿಂಗ್ಸ್ 84 ಓವರ್ 258/4

(ಶ್ರೇಯಸ್ ಅಯ್ಯರ್ ಅಜೇಯ 75, ರವೀಂದ್ರ ಜಡೇಜಾ ಅಜೇಯ 50, ಶುಬ್ಮನ್ ಗಿಲ್ 52, ಅಜಿಂಕ್ಯ ರಹಾನೆ 35, ಚೇತೇಶ್ವರ್ ಪೂಜಾರ 26 ರನ್- ಕೈಲೆ ಜೇಮಿಸನ್ 47/3)