ಮಂಗಳೂರು ಸ್ಪೋಟಕ್ಕೆ ದುಬೈನಲ್ಲಿ ಸ್ಕೆಚ್; ಸ್ಪೋಟಕ ಮಾಹಿತಿ ಬಯಲು !

ಮಂಗಳೂರು ; ಸ್ಪೋಟಕ್ಕೆ ದುಬೈನಲ್ಲಿ ಸ್ಕೆಚ್ ನಡೆದಿತ್ತು ಎಂಬ ಸ್ಪೋಟಕ ಮಾಹಿತಿ ಪೊಲೀಸ್ ತನಿಖೆಯಲ್ಲಿ ಬಯಲಾಗಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತೀವ್ರ ತನಿಖೆ ನಡೆಸುತ್ತಿದ್ದಾರೆ. ಮಂಗಳೂರು ಆಟೋ ರಿಕ್ಷಾ ಸ್ಫೋಟಕ್ಕೆ ಪ್ರಚೋದನೆ ನೀಡಲು ಡಿಟೋನೇಟರ್, ವೈರ್ ಗಳು ಮತ್ತು ಬ್ಯಾಟರಿಗಳನ್ನು ಅಳವಡಿಸಿದ ಪ್ರೆಶರ್-ಕುಕ್ಕರ್ ಅನ್ನು ಬಳಸಲಾಗಿದೆ. ಇದಕ್ಕೆಲ್ಲ ದುಬೈನಲ್ಲಿಯೇ ನಕ್ಷೆ ತಯಾರಿ ನಡೆಸಿದ್ದರು ಎಂಬ ಸ್ಟೋಟಕ ಮಾಹಿತಿ ಖಾಕಿ ತನಿಖೆಯಲ್ಲಿ ಬಯಲಾಗಿದೆ.