ಫೋನ್ ನಲ್ಲಿ 'ಪ್ರಧಾನಿ ಮೋದಿ' ಧ್ವನಿ ಕೇಳುತ್ತಿದ್ದಂತೆ ಕೈ ಮುಗಿದಿದ್ದ 'ಸಿದ್ದೇಶ್ವರ ಶ್ರೀ'ಗಳು

ಫೋನ್ ನಲ್ಲಿ 'ಪ್ರಧಾನಿ ಮೋದಿ' ಧ್ವನಿ ಕೇಳುತ್ತಿದ್ದಂತೆ ಕೈ ಮುಗಿದಿದ್ದ 'ಸಿದ್ದೇಶ್ವರ ಶ್ರೀ'ಗಳು

ವಿಜಯಪುರ: ಮೊನ್ನೆಯಷ್ಟೇ ಸಿದ್ದೇಶ್ವರ ಶ್ರೀ ಆರೋಗ್ಯ ವಿಚಾರಿಸಿದ್ದೆವು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಒತ್ತಾಯಿಸಿದ್ದೆವು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ವಿಜಯಪುರದ ಸೈನಿಕ ಶಾಲೆ ಮೈದಾನದಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ ಮೊನ್ನೆಯಷ್ಟೇ ಸಿದ್ದೇಶ್ವರ ಶ್ರೀಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೆವು, ಫೋನ್ ನಲ್ಲಿ ಪ್ರಧಾನಿ ಮೋದಿ ಧ್ವನಿ ಕೇಳುತ್ತಿದ್ದಂತೆ ಸಿದ್ದೇಶ್ವರ ಶ್ರೀಗಳು ಕೈ ಮುಗಿದಿದ್ದರು.

ಮೋದಿಯವರು ಕರೆ ಮಾಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದರು. ಶ್ರೀಗಳು ನುಡಿದಂತೆ ನಡೆಯುತ್ತಿದ್ದರು, ಭಾರತ ಸರ್ಕಾರದ ಪರವಾಗಿ ಶ್ರೀಗಳಿಗೆ ಶ್ರದ್ದಾಂಜಲಿ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.

ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ.ಸೈನಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಶ್ರೀಗಳ ಅಂತಿಮ ದರ್ಶನವನ್ನು ಸಿಎಂ ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ , ಪ್ರಹ್ಲಾದ್ ಜೋಶಿ, ಶಶಿಕಲಾ ಜೋಲ್ಲೆ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಅಂತಿಮ ದರ್ಶನ ಪಡೆದಿದ್ದಾರೆ.