ಗಾರ್ಮೆಂಟ್ ನೌಕರರಿಗೆ' ಭರ್ಜರಿ ಗುಡ್ ನ್ಯೂಸ್ :ಕನಿಷ್ಠ ವೇತನ ನಿಗದಿ ಮಾಡಿ ಕಾರ್ಮಿಕ ಇಲಾಖೆ ಆದೇಶ

ಗಾರ್ಮೆಂಟ್ ನೌಕರರಿಗೆ' ಭರ್ಜರಿ ಗುಡ್ ನ್ಯೂಸ್ :ಕನಿಷ್ಠ ವೇತನ ನಿಗದಿ ಮಾಡಿ ಕಾರ್ಮಿಕ ಇಲಾಖೆ ಆದೇಶ

ಬೆಂಗಳೂರು : ಗಾರ್ಮೆಂಟ್ಸ್ ನೌಕರರಿಗೆ ಕಾರ್ಮಿಕ ಇಲಾಖೆಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಗೌರ್ಮೆಂಟ್ ನೌಕರರಿಗೆ ಕನಿಷ್ಠ ವೇತನವನ್ನು 8,800 ರೂ.ನಿಂದ 13,200 ರೂ.ಗೆ ಹೆಚ್ಚಳ ಮಾಡಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.

ಕಾರ್ಮಿಕ ಇಲಾಖೆಯು ಗಾರ್ಮೆಂಟ್ಸ್, ಸ್ವಿನ್ನಿಂಗ್ ಮಿಲ್, ರೇಷ್ಮೆಬಟ್ಟೆ ಹಾಗೂ ಬಟ್ಟೆಗೆ ಬಣ್ಣ ಹಾಕುವ ಡೈ ಕಾರ್ಖಾನೆಗಳ ಕಾರ್ಮಿಕರ ಕನಿಷ್ಟ ವೇತನ ಪರಿಷ್ಕರಣೆ ಮಾಡಿ ಕಾರ್ಮಿಕ ಇಲಾಖೆ ಆದೇಶಿಸಿದೆ. 2019 ರಲ್ಲಿ ನಿಗದಿಪಡಿಸಿದ್ದ ಕನಿಷ್ಟ ವೇತನವನ್ನು ಶೇ. 14 ರಷ್ಟು ಹೆಚ್ಚಳ ಮಾಡಲಾಗಿದೆ. ಹೀಗಾಗಿ ಕಾರ್ಮಿಕರಿಗೆ ಕನಿಷ್ಟ 8800 ರೂ.ನಿಂದ 13,200 ರೂ. ವೇತನ ಸಿಗಲಿದೆ.

ಇತ್ತೀಚಿಗೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಗಾರ್ಮೆಂಟ್ಸ್ ನೌಕರರ ವೇತನ ಹೆಚ್ಚಳ ಸಂಬಂಧ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ 2019 ರಲ್ಲಿ ವಿವಿಧ ಕೆಲಸಗಳಿಗೆ ನಿಗದಿಯಾಗಿದ್ದ ಕನಿಷ್ಟ ವೇತನಕ್ಕೆ ಶೇ. 14 ರಷ್ಟು ಹೆಚ್ಚಳ ಮಾಡಿ ಪರಿಷ್ಕೃತ ಕನಿಷ್ಟ ವೇತನ ಜಾರಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.