ಊಟ ಮಾಡಿ ಕೈತೊಳೆಯುವಾಗಲೇ ಬಂದೆರಗಿತ್ತು ಸಾವು!

ಊಟ ಮಾಡಿ ಕೈತೊಳೆಯುವಾಗಲೇ ಬಂದೆರಗಿತ್ತು ಸಾವು!

ಳ್ಳಾರಿ: ಊಟ ಮಾಡಿ ಕೈತೊಳೆಯುವಾಗಲೆ ಬಂದೆರಗಿತ್ತು ಸಾವು ಎಂಬಂತಾಗಿದೆ ಇಲ್ಲೊಬ್ಬಳು ಯುವತಿಯ ಪರಿಸ್ಥಿತಿ. ಏಕೆಂದರೆ ಊಟ ಮಾಡಿ ಕೈತೊಳೆಯಲು ಹೋದ ಮರುಕ್ಷಣದಲ್ಲೇ ಈ ಯುವತಿ ಪ್ರಾಣ ಕಳೆದುಕೊಂಡಿದ್ದಾಳೆ. ಬಳ್ಳಾರಿ ಜಿಲ್ಲೆಯಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ.

ಬಳ್ಳಾರಿಯ ಬಂಡಿಹಟ್ಟಿ ಬಳಿ ಈ ಪ್ರಕರಣ ನಡೆದಿದೆ. 18 ವರ್ಷದ ಲಾವಣ್ಯ ಸಾವಿಗೀಡಾದ ಯುವತಿ. ಈಕೆ ಬಳ್ಳಾರಿಯ ಹಾನಗಲ್ ಕುಮಾರಸ್ವಾಮಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ಕಾಲೇಜು ಮುಗಿದ ಬಳಿಕ ಇಲ್ಲಿನ ಬಂಡಿಹಟ್ಟಿ ಕಾಲುವೆ ಸಮೀಪ ಊಟ ಮಾಡಿ ಕೈ ತೊಳೆಯಲು ಹೋದಾಗ ದುರಂತ ಸಂಭವಿಸಿದೆ. ಜಾರಿ ಕಾಲುವೆಗೆ ಬಿದ್ದ ಯುವತಿ ಪ್ರಾಣ ಕಳೆದುಕೊಂಡಿದ್ದಾಳೆ. ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.