ಉಲ್ಟಾ ಹೊಡೆದ ಪಂಜಾಬ್ ಸಿಎಂ- ಪ್ರಧಾನಿ ಮೋದಿ ರಕ್ಷಣೆಗೆ ನನ್ನ ಜೀವವನ್ನೇ ಬಲಿಕೊಡುತ್ತಿದ್ದೆ, ಆದ್ರೆ. ಎಂದ ಚನ್ನಿ
ಅಮೃತಸರ: ಪಂಜಾಬ್ಗೆ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಭೇಟಿ ಕೊಟ್ಟ ಸಂದರ್ಭದಲ್ಲಿ ಉಂಟಾದ ಭಾರಿ ವೈಫಲ್ಯದ ಬಗ್ಗೆ ವಿವಾದ ಎದ್ದ ಬೆನ್ನಲ್ಲೇ ಇದರ ಪ್ರಕರಣ ಕೂಡ ಇದಾಗಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಪ್ರಧಾನಿ ಮೋದಿ ಅವರು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ರಾಜಕೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲು ತೆರಳುತ್ತಿದ್ದರು.
'ಪ್ರತಿಭಟನೆ ಕಾರಣ ರಸ್ತೆ ತಡೆ ಉಂಟಾಯಿತು. ಅದಕ್ಕಾಗಿ ನಾವು ವಿಷಾದಿಸುತ್ತೇವೆ. ಪ್ರಧಾನಿ ಅವರ ಭದ್ರತಾ ಲೋಪ ಆಗಲಿಲ್ಲ. ಆದ್ದರಿಂದ ಯಾವುದೇ ಸರ್ಕಾರಿ ಅಧಿಕಾರಿಗಳನ್ನು ಅಮಾನತು ಮಾಡಿಲ್ಲ ಎಂದಿರುವ ಮುಖ್ಯಮಂತ್ರಿ, ಫಿರೋಜ್ಪುರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಹರ್ಮನ್ ಹನ್ಸ್ ಅವರನ್ನು ಅಮಾನತಿನಲ್ಲಿ ಇರಿಸಲಾಗಿದೆ ಎಂಬ ವರದಿ ಸುಳ್ಳು ಎಂದಿದ್ದಾರೆ.
ಅಸಲಿಗೆ ಪ್ರಧಾನಿಯವರು ಬತಿಂಡಾದಲ್ಲಿ ವಿಮಾನದಿಂದ ಇಳಿದ ಬಳಿಕ ಅಲ್ಲಿಂದ ಹೆಲಿಕಾಪ್ಟರ್ನಲ್ಲಿ ಫಿರೋಜ್ಪುರಕ್ಕೆ ಹೆಲಿಕಾಪ್ಟರ್ನಲ್ಲಿ ಹೋಗಬೇಕಿತ್ತು. ಆದರೆ ದಟ್ಟನೆಯ ಮೋಡ ಹಾಗೂ ಮಳೆ ಸೂಚನೆ ಇದ್ದ ಹಿನ್ನೆಲೆಯಲ್ಲಿ 100 ಕಿಮೀ ಕಾರಿನಲ್ಲಿಯೇ ಪ್ರಯಾಣಿಸಿದ್ದರು. ಆದರೆ ಅಲ್ಲಿ ಅವರ ಕಾರನ್ನು ಮುತ್ತಿಗೆ ಹಾಕಲಾಗಿತ್ತು.