ನಾನು ಯಾರ ಕಾಲು ಹಿಡಿಯೋಕು ಹೋಗಿಲ್ಲ; ಮುರುಗೇಶ ನಿರಾಣಿ ಹೇಳಿಕೆಗೆ ಬಸನಗೌಡ ಪಾಟೀಲ್ ಯತ್ನಾಳ ತಿರುಗೇಟು
ವಿಜಯಪುರ: ನಿನ್ನೆ ಬಾಗಲಕೋಟೆಯಲ್ಲಿ ಸಚಿವ ಮುರುಗೇಶ ನಿರಾಣಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಮಾತನಾಡಿದ್ದರು, ಸಚಿವೆ ಶೋಭಾ ಕರಂದ್ಲಾಜೆ ಅವರ ಕಾಲಿಗೆ ಬಿದ್ದಿದ್ದರು ಎಂದು ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಇಂದು ಶಾಸಕ ಬಸನಗೌಡ ಪಾಟೀಲ್ ತಿರುಗೇಟು ನೀಡಿದ್ದಾರೆ.
ನಾನು ಯಾರ ಕಾಲು ಹಿಡಿಯೋಕು ಹೋಗಿಲ್ಲ. ನಾನು ವಾಜಪೇಯಿ, ಅಡ್ವಾಣಿ ಕಾಲಿಗೆ ನಮಸ್ಕಾರ ಮಾಡಿದ್ದೇನೆ. ಸಿದ್ಧಗಂಗಾಶ್ರೀ, ಸಿದ್ದೇಶ್ವರ ಶ್ರೀಗಳ ಕಾಲಿಗೆ ನಮಸ್ಕಾರ ಮಾಡಿದ್ದೇನೆ. ಆದ್ರೆ ಕೆಲವು ಸ್ವಾಮೀಜಿಗಳ ಕಾಲು ಮುಗಿಯಲ್ಲ. ಮುರುಘಾ ಶರಣರು ಬಂದಿದ್ದಾಗಲೂ ಕಾಲಿಗೆ ನಮಸ್ಕಾರ ಮಾಡಿಲ್ಲ. ಕೆಲ ತಲೆಹಿಡುಕರು ರಾಜಕೀಯಕ್ಕೆ ಬಂದ ಮೇಲೆ ತೊಂದರೆ ಆಗಿದೆ. ಶ್ರೀಗಳನ್ನು ಮನೆಗೆ ಕರೆದು ಲಕ್ಷಗಟ್ಟಲೆ ಹಣ ಕೊಡೋದು ಮಾಡ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.