ಬಿಜೆಪಿ ದ್ವೇಷ ರಾಜಕಾರಣದ ಮೂಲಕ ಕೆಂಪಣ್ಣ ಬಂಧನ - ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ

ಬಿಜೆಪಿ ದ್ವೇಷ ರಾಜಕಾರಣದ ಮೂಲಕ ಕೆಂಪಣ್ಣ ಬಂಧನ - ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ

ಲಬುರ್ಗಿ: ಗುತ್ತಿಗೆದಾರರ ಸಂಘದ ಕೆಂಪಣ್ಣ ಅವರನ್ನು ಬಂಧಿಸೋ ಕೇಸ್ ಏನು ಆಗಿರಲಿಲ್ಲ. ಬಿಜೆಪಿ ದ್ವೇಷ ರಾಜಕಾರಣದ ಮೂಲಕ ಅವರನ್ನು ಬಂಧಿಸಿದೆ ಎಂಬುದಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.

ಕಲಬುರ್ಗಿಯ ಜೇವರ್ಗಿಯಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಬಂಧನ, ಬಿಡುಗಡೆ ವಿಚಾರವಾಗಿ ಮಾತನಾಡಿದಂತ ಅವರು, ಕೆಂಪಣ್ಣ ಮೇಲೆ ಬಂಧಿಸೋ ಕೇಸ್ ಏನೂ ಇರಲಿಲ್ಲ.

ಅವರ ಮೇಲೆ ಮಾನನಷ್ಟ ಮೊಕದ್ದಮ್ಮೆಯನ್ನು ಮಾತ್ರವೇ ಹಾಕಲಾಗಿತ್ತು. ಆದ್ರೇ ಬಿಜೆಪಿ ದ್ವೇಷ ರಾಜಕಾರಣದ ಮೂಲಕ ಬಂಧಿಸಿದೆ ಎಂದು ವಾಗ್ಧಾಳಿ ನಡೆಸಿದರು.

ಕೆಂಪಣ್ಣ ಏನು ಕೊಲೆ ಮಾಡಿದ್ದರಾ? ದರೋಡೆ ಮಾಡಿದ್ದರಾ? ಅಂತಹ ಯಾವುದೇ ಕೆಲಸ ಮಾಡಿರಲಿಲ್ಲ. ಹೀಗಿದ್ದರೂ ಅವರನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಇದು ಬೇಕು ಅಂತಲೇ ಬಿಜೆಪಿಯವರು ಮಾಡಿದಂತ ಕೆಲಸವಾಗಿದೆ ಎಂದು ಗುಡುಗಿದರು.