ಚಂದ್ರು ಪ್ರಕರಣ: ಭಾವೋದ್ವೇಗ ಬೇಡ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು ; ರೇಣುಕಾಚಾರ್ಯ ಅವರು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ, ಆ ರೀತಿ ಭಾವೋದ್ವೇಗಕ್ಕೆ ಒಳಗಾಗೋದು ಸಹಜ. ಆದರೆ, ಇಷ್ಟೊಂದು ಭಾವೋದ್ವೇಗ ಬೇಡ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದರು.
ರೇಣುಕಾಚಾರ್ಯ ಸಹೋದರ ಮಗನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕುಟುಂಬದ ವ್ಯಕ್ತಿಯನ್ನು ಕಳೆದುಕೊಂಡಾಗ ರೇಣುಕಾಚಾರ್ಯ ಅವರು ಸಹಜವಾಗಿ ಭಾವೋದ್ವೇಗರಾಗಿದ್ದಾರೆ.