ಒಂದು ವರ್ಷದ ಬಳಿಕ ಬಿಎಸ್ವೈ ಗೆ ಹೆಚ್ಚಿನ ಮನ್ನಣೆ! ಬಿಜೆಪಿಗೆ ಶುರುವಾಯ್ತಾ ಲಿಂಗಾಯತ ಮತಗಳು ಕೈ ತಪ್ಪುವ ಭೀತಿ?

ಬೆಂಗಳೂರು,ಮಾರ್ಚ್ 4: ವಿಧಾನಸಭಾ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಭರ್ಜರಿ ಯಾತ್ರೆಯನ್ನ ನಡೆಸಿವೆ. ಈಗಾಗಲೇ ಸಾಕಷ್ಟು ಸಮೀಕ್ಷೆಗಳು ಬಿಜೆಪಿ ನಿರೀಕ್ಷೆ ತಕ್ಕಂತೆ ಸ್ಥಾನವನ್ನ ಪಡೆಯುವಲ್ಲಿ ಉಲ್ಟಾ ಹೊಡೆದಿದೆ. ಸಮೀಕ್ಷೆ ಹೀಗೆ ಬರಲು ಕಾರಣವೇನು? ಇದಕ್ಕೆ ಪರಿಹಾರವೇನು ಎಂದು ಸರಿಪಡಿಸಿಕೊಳ್ಳವ ಲೆಕ್ಕಾಚಾರವನ್ನ ಬಿಜೆಪಿ ನಡೆಸಿದೆ.
ಹೌದು, ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಿರುವ ಬಿ ಎಸ್ ಯಡಿಯೂರಪ್ಪ ನವರಿಗೆ ವಯಸ್ಸಿನ ನೆಪ ಹೇಳಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕಾಯ್ತು. ರಾಜೀನಾಮೆ ನೀಡುವ ಸಂದರ್ಭದಲ್ಲಿ ಭಾವನಾತ್ಮಕವಾಗಿ ಕಣ್ಣಿರು ಹಾಕಿ ಬಿ ಎಸ್ ಯಡಿಯೂರಪ್ಪ ನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಬಿ ಎಸ್ ಯಡಿಯೂರಪ್ಪ ನವರು ರಾಜೀನಾಮೆ ನೀಡಿದ ದಿನದಿಂದಲೂ ನಾನು ಪಕ್ಷ ಸಂಘಟನೆ ಮಾಡುತ್ತೇನೆ. ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ಹೇಳಿದರು. ಆದರೆ, ಈ ಹಿಂದೆ ಪಕ್ಷ ಅದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎನ್ನುವ ಮಾತುಗಳು ಕೇಳಿ ಬಂದಿತ್ತು. ನಂತರ ಕಾಂಗ್ರೆಸ್ ಯಡಿಯೂರಪ್ಪ ನವರನ್ನ ಮೂಲೆಗುಂಪು ಮಾಡುತ್ತಿದೆ ಎಂದು ಸಾಕಷ್ಟು ಆರೋಪಗಳು ರಾಜ್ಯ ರಾಜಕೀಯದದಲ್ಲಿ ಚರ್ಚೆಯಾಗ ತೊಡಗಿದ್ದು, ಇತ್ತ ಮಾಜಿ ಸಿಎಂ ಬಿಎಸ್ವೈ ಕೂಡ ಸೈಲೆಂಟ್ ಆದರು ಈ ನಡುವೆ ಬಿ ಎಸ್ ಯಡಿಯೂರಪ್ಪ ಇಲ್ಲದ ಬಿಜೆಪಿಯಿಂದ ಪಕ್ಷಕ್ಕೆ ಆಗುವ ಸಮಸ್ಯೆಯನ್ನ ಮನಗೊಂಡು ಇದೀಗ ಮತ್ತೆ ಬಿಎಸ್ ವೈ ಓಲೈಕೆ ಮಾಡವ ಮೂಲಕ ಲಿಂಗಾಯತ ಮತಗಳನ್ನ ಉಳಿಸಿಕೊಳ್ಳುವ ಲೆಕ್ಕಾಚಾರವನ್ನ ಬಿಜೆಪಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಈಗಾಗಲೇ ಹಲವು ದಶಕಗಳಿಂದ ಬಿ ಎಸ್ ಯಡಿಯೂರಪ್ಪನವರು ಹೋರಾಟ ನಡೆಸುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಕೋಟೆಯನ್ನ ಭದ್ರಗೊಳಿಸುತ್ತಾ ಬಂದಿದ್ದಾರೆ. ರಾಜಕೀಯ ಎದುರಾಳಿಗ ವಿರುದ್ದ ಕಷ್ಟ ಪಟ್ಟು ಸರ್ಕಾರವನ್ನ ರಚನೆ ಮಾಡಿದ್ದ ಬಿ.ಎಸ್. ಯಡಿಯೂರಪ್ಪ ನವರನ್ನ ವಯಸ್ಸಿನ ಕಾರಣ ಹೇಳಿ ರಾಜೀನಾಮೆ ಮಾತು ಈ ಹಿಂದೆ ಕೇಳಿ ಬಂದಾಗ ಬಿಎಸ್ ಯಡಿಯೂರಪ್ಪ ನವರ ಕಾವೇರಿ ನಿವಾಸಕ್ಕೆ ರಾಜ್ಯದ ಲಿಂಗಾಯತ ಮಠಾದೀಶರು ಹಾಗೂ ಸ್ವಾಮಿಜಿಗಳು ಆಗಮಿಸಿ ಬಿಎಸ್ವೈ ಬೆಂಬಲಕ್ಕೆ ನಿಂತಿದ್ದರು.
ಬಿಎಸ್ವೈ ಹಿಂದೆ ಸಾಕಷ್ಟು ಲಿಂಗಾಯತ ಸ್ವಾಮೀಜಿಗಳು ಹಾಗೂ ಮಠಾದೀಶರು ಅವರ ಹಿಂದೆ ನಿಂತು ಹೈಕಮಾಂಡ್ ಗೆ ಶಕ್ತಿ ಪ್ರದರ್ಶನವನ್ನ ತೋರಿಸಿದರು. ನಂತರ ಹೈಕಮಾಂಡ್ ಸೂಚನೆಯಂತೆ ಬಿ.ಎಸ್ ಯಡಿಯೂರಪ್ಪ ನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಯಡಿಯೂರಪ್ಪ ನವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ ಹಿನ್ನೆಲೆ ಲಿಂಗಾಯತ ಸಮುದಾಯ ಅಸಮಾಧಾನಕ್ಕೆ ಒಳಗಾಗಿತ್ತು. ಈ ಅಸಮಾಧಾನ ಶಮನಗೊಳಿಸಲು ಬಿಎಸ್ವೈ ಸ್ಥಾನಕ್ಕೆ ಲಿಂಗಾಯತ ಸಮುದಾಯದವರೇ ಆದ ಬಸವರಾಜ ಬೊಮ್ಮಾಯಿ ಅವರನ್ನ ಸಿಎಂ ಮಾಡಿದರು ಕೂಡ ಯಡಿಯೂರಪ್ಪ ನವರಿಗೆ ಅನ್ಯಾಯವಾಗಿದೆ ಎನ್ನುವ ಅಸಮಾಧಾನ ಲಿಂಗಾಯತ ಸಮುದಾಯದ ಸ್ವಾಮೀಜಿಗಳಲ್ಲಿ ಇನ್ನೂ ಹಾಗೇ ಉಳಿದಿದೆ ಎನ್ನಲಾಗಿದೆ.
ಬಿಎಸ್ವೈ ಇಲ್ಲದ ಬಿಜೆಪಿ; ಶುರುವಾಯ್ತು ಹಿಡಿತ ಕೈ ತಪ್ಪುವ ಆತಂಕ?
ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್ ಯಡಿಯೂರಪ್ಪ ನವರು ರಾಜೀನಾಮೆ ಕೊಟ್ಟ ಸಂದರ್ಭದಿಂದಲೇ ಅವರ ಆಪ್ತ ಬೆಂಬಲಿಗರು ಅವರ ಸುತ್ತಾ ತಿರುಗಾಡುವುದು ಕಡಿಮೆಯಾಯ್ತು. ನಂತರ ಯಡಿಯೂರಪ್ಪ ನವರಿಗೆ ಪಕ್ಷದಲ್ಲಿ ಸೂಕ್ತ ರೀತಿಯಲ್ಲಿ ನಡೆಸುತ್ತಿಳ್ಳುತ್ತಿಲ್ಲ ಎನ್ನುವ ಅಸಮಾಧಾನ ಪಕ್ಷದ ಕಾರ್ಯಕರ್ತರಲ್ಲೇ ಕೇಳಿ ಬಂತು. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಿಎಸ್ವೈ ಇಲ್ಲದ ಬಿಜೆಪಿ ಹೇಗೆ ಎನ್ನುವ ಲೆಕ್ಕಾಚಾರ ಪಕ್ಷದೊಳಗೆ ಸಾಕಷ್ಟು ಚರ್ಚೆಗೆ ಕಾರಣವಾಯ್ತು.
ಪಕ್ಷದೊಳಗಿನ ಅಪಸ್ವರ ಹಾಗೂ ವಿಪಕ್ಷಗಳ ಟೀಕೆಗೆ ಬ್ರೇಕ್ ಹಾಕಲು ಬಿಜೆಪಿ ಹೈಕಮಾಂಡ್ ರಾಷ್ಟ್ರ ಮಟ್ಟದಲ್ಲಿ ಯಡಿಯೂರಪ್ಪ ಅವರಿಗೆ ಬಿಜೆಪಿ ಕೇಂದ್ರೀಯ ಸಂಸದೀಯ ಸಮಿತಿಯಲ್ಲಿ ಸ್ಥಾನ ನೀಡಲಾಯಿತು. ಆದರೆ ರಾಜ್ಯದಲ್ಲಿ ಪಕ್ಷ ಕಟ್ಟಿ ಬೆಳೆಸಿದ ಬಿಎಸ್ವೈ ಯಡಿಯೂರಪ್ಪ ನವರನ್ನ ರಾಜ್ಯ ರಾಜಕಾರಣದಿಂದ ದೂರ ಇಡುವ ಪ್ರಯತ್ನಗಳು ಆಗುತ್ತಿವೆ ಎನ್ನುವ ಮಾತುಗಳು ಕೇಳಿ ಬಂದದಿತ್ತು. ಇತ್ತ ಬಿಎಸ್ವೈ ಅವರನ್ನ ನಂಬಿ ಪಕ್ಷಕ್ಕೆ ಬಂದ ಅದೆಷ್ಟೋ ಜನ ನಾಯಕರು ಈಗಾಗಲೇ ನಂಬಿಕೆಯನ್ನ ಕಳೆದುಕೊಂಡಿದ್ದು, ರಾಜಕೀಯ ಜೀವನಕ್ಕಾಗಿ ಒಂದು ಕಾಲು ಇಡುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ಬಿಎಸ್ವೈ ಇಲ್ಲದ ಬಿಜೆಪಿ ಹೇಗೆ ಸಾಧ್ಯ ಎಂದು ಹಲವು ನಾಯಕರಿಗೆ ಆತಂಕ ಸೃಷ್ಟಿಯಾಗಿದ್ದು, ಬಿಎಸ್ವೈ ಅವರನ್ನ ರಾಜ್ಯ ರಾಜಕೀಯದಿಂದ ದೂರ ಇಡುವ ಪ್ರಯತ್ನದಿಂದಾಗಿ ದಿನೇ ದಿನೇ ಬಿಜೆಪಿ ಹಿಡಿತ ಕೈತಪ್ಪುತ್ತಿದೆ ಎನ್ನುವ ಆತಂಕ ಬಿಎಸ್ವೈ ಆಪ್ತ ವಲಯದಲ್ಲಿ ಶುರುವಾಗಿದೆ. ಚುನಾವಣೆ ಹತ್ತಿರವಾಗುತ್ತಿದ್ದ ಸಮಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಶಕ್ತಿ ಪಕ್ಷಕ್ಕೆ ಅತಿ ಅಗತ್ಯವಾಗಿದೆ ಎಂದು ಬಿಜೆಪಿ ಹೈಕಮಾಂಡ್ ತಿಳಿದಿದ್ದು, ಇದೀಗ ಹೆಚ್ಚಿನ ಮನ್ನಣೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಬಿಜೆಪಿಗೆ ಯಡಿಯೂರಪ್ಪ ನವರ ಅನಿವಾರ್ಯತೆ ಗೊತ್ತಾಯ್ತಾ?
ಕರ್ನಾಟಕದಲ್ಲಿ ಬಿಜೆಪಿಗೆ ದೊಡ್ಡ ಶಕ್ತಿಯಾಗಿರುವ ಯಡಿಯೂರಪ್ಪ ನವರು ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಾಕಷ್ಟು ಅಸಮಾಧಾನಕ್ಕೆ ಒಳಪಟ್ಟಿದ್ದಾರೆ ಎಂಬ ಚರ್ಚೆ ನಡೆಯುತ್ತಿದ್ದು, ಚುನಾವಣೆ ಹೊತ್ತಲಿ ಯಡಿಯೂರಪ್ಪ ನವರನ್ನ ಚುನಾವಣಾ ತಂತ್ರಗಾರಿಕೆಯಿಂದ ದೂರ ಇಟ್ಟರೆ ಪಕ್ಷದ ಹಿಡಿತ ಕೈತಪ್ಪಲಿದೆ ಎಂಬ ಆತಂಕ ಈಗಾಗಲೇ ಬಿಜೆಪಿ ನಾಯಕರಿಗೆ ಗೊತ್ತಾಗಿದೆ. ಪ್ರಬಲ ಲಿಂಗಾಯತ ಸಮುದಾಯದ ಬೆಂಬಲ ಹೊಂದಿರುವ ಯಡಿಯೂರಪ್ಪ ಅವರನ್ನು ಕಡೆಗಣಿಸಿದಷ್ಟೂ ಪಕ್ಷಕ್ಕೆ ಹಿನ್ನಡೆ ಎನ್ನುವುದು ಕೇಂದ್ರ ನಾಯಕರಿಗೆ ತಿಳಿದಿದೆ.
ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರೇ ಯಡಿಯೂರಪ್ಪ ಅನಿವಾರ್ಯ ಎಂದು ಪಕ್ಷದ ಕಾರ್ಯಕರ್ತರಲ್ಲೇ ಈ ರೀತಿಯ ಚರ್ಚೆ ಜೋರಾಗಿ ಕೇಳಿಬರುತ್ತಿದೆ. ಹೀಗಾಗಿ ಪಕ್ಷದ ಹಿಡಿತ ರಾಜ್ಯದಲ್ಲಿ ಇರ್ಬೇಕು ಹಾಗೂ ಪಕ್ಷ ಅಧಿಕಾರಕ್ಕೆ ಬರಬೇಕು ಎಂದ್ರೆ ಬಿಎಸ್ ಯಡಿಯೂರಪ್ಪ ಅನಿವಾರ್ಯ ಎಂಬುದು ಹೈಕಮಾಂಡ್ ಗೊತ್ತಾಗಿದೆ. ಹೀಗಾಗಿ ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆಯ ವೇಳೆ ವೇದಿಕೆಯ ಮೇಲೆ ಬಿಎಸ್ವೈ ಅವರನ್ನ ಹಡಿಹೊಗಳುವ ಮೂಲಕ ಬಿಎಸ್ವೈ ಅಸಮಾಧಾನವನ್ನ ಶಮನಗೊಳಿಸುವ ಮೂಲಕ ಲಿಂಗಾಯತ ತ ಬ್ಯಾಂಕ್ ಅನ್ನ ಉಳಿಸಿಕೊಳ್ಳುವ ಪ್ರಯತ್ನವನ್ನ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನೂ ಪ್ರಧಾನಿ ಮೋದಿ ಅವರೇ ಯಡಿಯೂರಪ್ಪ ನವರನ್ನ ಕೈ ಹಿಡಿದು ನಡೆಸಿಕೊಂಡು ಬಂದು ಹಸಿರು ಶಾಲು ಹೊದಿಸಿ, ನೇಗಿಲನ್ನು ನೀಡಿ ಗೌರಯುತವಾಗಿ ಸನ್ಮಾನಿಸಲಾಯಿತು. ಬಿಜೆಪಿ ಹೈಕಮಾಂಡ್ ಈ ಎಲ್ಲಾ ಲೆಕ್ಕಾಚಾರವನ್ನ ಗಮನಿಸಿದರೇ ಲಿಂಗಾಯತ ವೋಟ್ ಬ್ಯಾಂಕ್ ನ್ನ ಭದ್ರಪಡಿಸಿಕೊಳ್ಳುವ ತಂತ್ರಗಾರಿಗೆ ಎಂದು ಸ್ಪಷ್ಟವಾಗ್ತಿದೆ.
ಬಿಜೆಪಿಯಲ್ಲಿ ಬಿಎಸ್ವೈ ಕಡಗಣನೆ; ಲಿಂಗಾಯತ ಮತಕ್ಕೆ ಕೈ ತಂತ್ರವೇನು?
ಈಗಾಗಲೇ ಮುಖ್ಯಮಂತ್ರಿ ಸ್ಥಾನದಿಂದ ಬಿ ಎಸ್ ಯಡಿಯೂರಪ್ಪ ನವರನ್ನ ಕೆಳಗಿಳಿಸಿದ ದಿನದಿಂದಲೂ ಬಿಎಸ್ವೈ ಅವರನ್ನ ಕಣ್ಣಿರು ಹಾಕಿಸಿದೆ ಎಂದು ಬಿಜೆಪಿ ನಾಯಕರ ವಿರುದ್ದ ಕಾಂಗ್ರೆಸ್ ಆರೋಪವನ್ನ ಮಾಡಿಕೊಂಡೆ ಬಂದಿದೆ. ಯಡಿಯೂರಪ್ಪ ನವರು ಲಿಂಗಾಯತ ಸಮುದಾಯದ ಬಲ ಇರುವ ಪ್ರಭಾವಿ ನಾಯಕ ಇವರನ್ನ ಕಡೆಗಣಿಸಿದೆ ಎಂದು ಬಿಜೆಪಿಗೆ ಲಿಂಗಾಯತ ಮತಗಳು ಸಹ ಬಿಜೆಪಿಗೆ ಕೈ ಕೊಟ್ಟರೆ. ಇದರ ಲಾಭವನ್ನ ಪಡೆಯುವ ತಂತ್ರಗಾರಿಕೆಯನ್ನ ಕಾಂಗ್ರೆಸ್ ಹಾಕಿಕೊಂಡಿದೆ ಎನ್ನಲಾಗಿದೆ.
ಬಿಜೆಪಿಯಲ್ಲಿ ಯಡಿಯೂರಪ್ಪ ನವರನ್ನ ಹೊರತು ಪಡಿಸಿದರೇ ಸಾಕಷ್ಟು ಜನ ಬಿಜೆಪಿಯ ಹಿರಿಯ ನಾಯಕರಿದ್ದಾರೆ, ಆದರೆ ಯಡಿಯೂರಪ್ಪ ನವರ ರೀತಿ ಯಾರು ಮಾಸ್ ಲೀಡರ್ ಅಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿರುವ ಎಂ.ಬಿ.ಪಾಟೀಲ್ ಹಾಗೂ ಶಾಮನೂರು ಶಿವಶಂಕರಪ್ಪ ಅವರಂತ ನಾಯಕರ ಮೂಲಕ ಲಿಂಗಾಯತ ಮತಗಳನ್ನ ಪಡೆಯುವ ಲೆಕ್ಕಾಚಾರವನ್ನ ಕಾಂಗ್ರೆಸ್ ಹಾಕಿಕೊಂಡಿದೆ ಎನ್ನಲಾಗಿದ್ದು, ಚುನಾವಣೆಗೂ ಮುನ್ನ ಎಲ್ಲಾ ಲಿಂಗಾಯತ ಮಠಗಳಿಗೆ ಭೇಟಿ ನೀಡುವ ಪ್ಲಾನ್ ಕಾಂಗ್ರೆಸ್ ಹಾಕಿಕೊಂಡಿದೆ ಎನ್ನಲಾಗಿದೆ.