ಇಂದಿನಿಂದ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಟೋಲ್ ದರ ಹೆಚ್ಚಳ : ಯಾವ ವಾಹನಕ್ಕೆ ಎಷ್ಟು ದರ? ಇಲ್ಲಿದೆ ಮಾಹಿತಿ

ಇಂದಿನಿಂದ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಟೋಲ್ ದರ ಹೆಚ್ಚಳ : ಯಾವ ವಾಹನಕ್ಕೆ ಎಷ್ಟು ದರ? ಇಲ್ಲಿದೆ ಮಾಹಿತಿ

ಬೆಂಗಳೂರು: ಬೆಂಗಳೂರು- ಮೈಸೂರು ಎಕ್ಸ್‌ ಪ್ರೆಸ್‌ ವೇ ಟೋಲ್‌ ಸಂಗ್ರಹ ಆರಂಭವಾಗಿ 17 ದಿನದಲ್ಲೇ ಎಕ್ಸ್‌ಪ್ರೆಸ್‌ ವೇನಲ್ಲಿ ಟೋಲ್‌ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ.

ಹೌದು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್‌ ಸಂಗ್ರಹ ಆರಂಭವಾದ 17 ದಿನದಲ್ಲೇ ಟೋಲ್‌ ಮೊತ್ತ ಹೆಚ್ಚಿಸಲು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ.

ಈ ಹೊಸ ಟೋಲ್‌ ದರವು ಏಪ್ರಿಲ್‌ 1 ರ ಇಂದಿನಿಂದ ಜಾರಿ ಆಗಲಿದೆ. ಟೋಲ್‌ ದರದಲ್ಲಿ ಶೇ.22ರಷ್ಟು ಹೆಚ್ಚಳ ಮಾಡುತ್ತಿದ್ದು, ಇದು ವಾಹನ ಸವಾರರ ಆಕ್ರೋಶ ಕಾರಣವಾಗಿದೆ.

ಹೆದ್ದಾರಿ ಓಪನ್ ಆದ ದಿನದಿಂದಲೂ ಸುದ್ದಿಯಾಗಿದ್ದ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇ ಟೋಲ್ ದರ ಹೆಚ್ಚಳ ಮಾಡಲಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತೆ ಶೇಕಡಾ 22ರಷ್ಟು ಟೋಲ್ ದರ ಹೆಚ್ಚಿಸಿದೆ. ಏಪ್ರಿಲ್ 1ರಿಂದ ಶೇಕಡಾ 22ರಷ್ಟು ದರ ದುಬಾರಿಯಾಗಲಿದೆ. ಟೋಲ್ ಸಂಗ್ರಹ ಆರಂಭವಾದ 17 ದಿನದಲ್ಲೇ ಮತ್ತೆ ಟೋಲ್ ದರ ಹೆಚ್ಚಳ ಮಾಡಿದ್ದು, ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.

ಹೊಸ ಟೋಲ್ ದರದ ವಿವರ ಇಲ್ಲಿದೆ
1. ಕಾರು, ವ್ಯಾನ್‌, ಜೀಪ್‌: 165 ರೂಪಾಯಿ, ದ್ವಿಮುಖ ಸಂಚಾರ 250 ರೂಪಾಯಿ ಮತ್ತು ಒಂದು ಬಾರಿ 30 ರೂಪಾಯಿ, ಮತ್ತೊಂದು ಬಾರಿ 45 ರೂಪಾಯಿ ಹೆಚ್ಚಳ ಮಾಡಲಾಗಿದೆ.
2. ಟ್ರಕ್‌, ಬಸ್‌, ಟ್ಯಾಕ್ಸಿ: 565 ರೂಪಾಯಿ, ದ್ವಿಮುಖ ಸಂಚಾರಕ್ಕೆ 850 ರೂಪಾಯಿ. ಹಾಗೆಯೇ ಒಂದು ಬಾರಿ 165 ರೂಪಾಯಿ, ಮತ್ತೊಂದು ಬಾರಿ 160 ರೂಪಾಯಿ ಹೆಚ್ಚಳ ಮಾಡಲಾಗಿದೆ.
3. ಲಘು ವಾಹನಗಳು, ಮಿನಿ ಬಸ್‌: 270 ರೂಪಾಯಿ, ದ್ವಿಮುಖ ಸಂಚಾರಕ್ಕೆ 405 ರೂಪಾಯಿ ಆಗಿದೆ. ಅಲ್ಲದೇ ಒಂದು ಬಾರಿ 50 ರೂಪಾಯಿ ಎರಡನೇ ಬಾರಿ 75 ರೂಪಾಯಿ ಹೆಚ್ಚಳ ಮಾಡಲಾಗಿದೆ.
5. ಭಾರಿ ವಾಹನಗಳು: 885 ರೂಪಾಯಿ, ದ್ವಿಮುಖ ಸಂಚಾರಕ್ಕೆ 1,330 ರೂಪಾಯಿ ಆಗಿದೆ. ಹಾಗೆಯೇ ಮೊದಲ ಬಾರಿ 165 ರೂಪಾಯಿ ಎರಡನೇ ಬಾರಿ 250 ರೂಪಾಯಿ ಹೆಚ್ಚಳ ಮಾಡಲಾಗಿದೆ.