ಶಿಕ್ಷಣ ಇಲಾಖೆಯಿಂದ 2023-24 ನೇ ಸಾಲಿನ `ಶಾಲಾ ವೇಳಾಪಟ್ಟಿ' ಪ್ರಕಟ : ಮೇ. 29 ರಿಂದ ಶಾಲೆ ಆರಂಭ
ಬೆಂಗಳೂರು : ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು 2023-24 ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮೇ. 29 ರಿಂದ ತರಗತಿಗಳು ಆರಂಭವಾಗಲಿದ್ದು, ಏಪ್ರಿಲ್ 10 2024 ಕ್ಕೆ ಮುಕ್ತಯಗೊಳ್ಳಲಿವೆ.
2023-24 ನೇ ಶೈಕ್ಷಣಿಕ ಸಾಲಿನ ಶಾಲಾ ವೇಳಾಪಟ್ಟಿ ಸಂಬಂಧ ಸುತ್ತೋಲೆ ಹೊರಡಿಸಲಾಗಿದ್ದು, ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಏಕರೂಪದ ಶೈಕ್ಷಣಿಕ ಮಾರ್ಗಸೂಚಿ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಲಾಗಿದೆ.
ಶಾಲಾ ವೇಳಾಪಟ್ಟಿಯ ಪ್ರಕಾರ 2023 ರ ಮೇ. 29 ರಿಂದ ಅಕ್ಟೋಬರ್ 7 ವರೆಗೆ ಶಾಲಾ ಕರ್ತವ್ಯದ ದಿನಗಳಾಗಿವೆ. 2023 ರ ಅ. 8 ರಿಂದ 24 ರವರೆಗೆ ಮಧ್ಯಂತರ ರಜೆ, ಅ. 25 ರಿಂದ 2024 ರ ಏಪ್ರಿಲ್ 10 ರವರೆಗೆ ಶಾಲಾ ಕರ್ತ್ಯವದ ದಿನಗಳು, 2024 ರ ಏಪ್ರಿಲ್ 11 ರಿಂದ ಮೇ. 28 ರವರೆಗೆ ಬೇಸಿಗೆ ರಜೆ ಘೋಷಿಸಲಾಗಿದೆ.