ಹುಬ್ಬಳ್ಳಿಯಲ್ಲಿ ಗುಂಡಿಗಳಿಲ್ಲದ ರಸ್ತೆ ಯಾವುದಯ್ಯಾ: ಯಾವಾಗ ಸಿಗುವುದು ಸಮಸ್ಯೆಯಿಂದ ಮುಕ್ತಿ

ಹುಬ್ಬಳ್ಳಿ:ಅವಳಿ ನಗರದ ರಸ್ತೆಗಳಲ್ಲಿ ಸಂಚರಿಸಬೇಕಾದರೆ ವಾಹನ ಸವಾರರು ಸುಗಮ ಸಂಚಾರಕ್ಕೆ ದಾರಿ ಯಾವುದಯ್ಯ ಎನ್ನುವಂತಾಗಿದೆ.
ಮಳೆಯಿಂದಾಗಿ ಹುಬ್ಬಳ್ಳಿಯ ಕಾಟನ್ ಮಾರ್ಕೆಟ್, ಕೊಪ್ಪಿಕರ ರಸ್ತೆ, ಗೋಪನಕೊಪ್ಪ ರಸ್ತೆ ಸೇರಿದಂತೆ ಹಲವಾರು ಪ್ರಮುಖ ರಸ್ತೆಗಳು ತಗ್ಗು-ಗುಂಡಿಗಳಿಂದ ಕೂಡಿದ್ದು, ಮಳೆಯ ನೀರಿನಿಂದಾಗಿ ರಸ್ತೆ ಯಾವುದು? ಹೊಂಡ ಯಾವುದು? ತಿಳಿಯದ ಸ್ಥಿತಿ ತಲುಪಿದೆ.
ಮಳೆಗಾಲದಲ್ಲಿ ತಗ್ಗು ಗುಂಡಿಗಳಿಂದ ಕೂಡಿದ ಕೆಸರಿನ ಕಿರಿಕಿರಿಯಾದರೇ, ಬೇಸಿಗೆಯಲ್ಲಿ ಧೂಳಿನಿಂದ ಸಾರ್ವಜನಿಕರು ತೊಂದರೆಯನುಭವಿಸುತ್ತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.
ಒಟ್ಟಿನಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಗುಂಡಿಗಳಿಲ್ಲದ ರಸ್ತೆ ಅದ್ಯಾವುದಯ್ಯಾ...? ಗುಂಡಿಗಳಿಂದ ಮುಕ್ತಿ ಸಿಗುವುದಾದರೂ ಯಾವಾಗ ಎಂಬುವಂತ ಯಕ್ಷ ಪ್ರಶ್ನೆ ಸಾರ್ವಜನಿಕರಲ್ಲಿ ಮನೆ ಮಾಡಿದೆ.