ಶೀರಾಮಸೇನಾ ಅಧ್ಯಕ್ಷನ ಮೇಲೆ ಗುಂಡೇಟು: ಬೆಳಗಾವಿಯ ಎಲ್ಲೆಡೆ ನಾಕಾಬಂಧಿ
ಬೆಳಗಾವಿ: ಹಿಂಡಲಗಾ ಗ್ರಾಮದಲ್ಲಿ ಹಿಂದೂ ರಾಷ್ಟ್ರ ಸೇನಾ ಹಾಗೂ ಶ್ರೀರಾಮಸೇನಾ ಅಧ್ಯಕ್ಷ ರವಿ ಕೋಕಿತಕರ ಹಾಗೂ ಕಾರು ಚಾಲಕನ ಮೇಲೆ ಶನಿವಾರ ರಾತ್ರಿ ನಡೆದ ಫೈರಿಂಗ್ ಗೆ ಸಂಬಂಧಿಸಿದಂತೆ ನಾಲ್ಕು ತಂಡಗಳನ್ನು ರಚಿಸಿ ನಗರದೆಲ್ಲೆಡೆ ನಾಕಾಬಂಧಿ ಹಾಕಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ನಗರದಿಂದ ಸ್ಕಾರ್ಪಿಯೋ ವಾಹನದಲ್ಲಿ ನಾಲ್ಕು ಜನರೊಂದಿಗೆ ರವಿ ಕೋಕಿತಕರ ಅವರು ತಮ್ಮ ಸ್ವಂತ ಗ್ರಾಮ ಹಿಂಡಲಗಾಕ್ಕೆ ಬರುತ್ತಿದ್ದರು. ಪ್ರಾಥಮಿಕ ಮರಾಠಿ ಶಾಲೆ ಬಳಿಯ ಸ್ಪೀಡ್ ಬ್ರೇಕರ್ ಗೆ ವಾಹನ ನಿಧಾನ ಮಾಡಿದಾಗ ದ್ವಿಚಕ್ರ ವಾಹನದ ಮೇಲೆ ಬಂದ ಇಬ್ಬರು ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಮುಂಭಾಗದಲ್ಲಿ ರವಿ ಕುಳಿತುಕೊಂಡಿದ್ದರು. ಇನ್ನಿಬ್ಬರು ಹಿಂಬದಿ ಸೀಟ್ ನಲ್ಲಿ ಇದ್ದರು. ಗುಂಡಿನ ದಾಳಿಯಿಂದ ರವಿ ಹಾಗೂ ಕಾರು ಚಾಲಕ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದರು.
ರವಿ ಕೋಕಿತಕರ ಮೇಲೆ ಗುಂಡಿನ ದಾಳಿ ನಡೆದಿರುವುದನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ. ಎಲ್ಲ ಅಯಾಮದಿಂದಲೂ ತನಿಖೆ ತೀವ್ರಗೊಳಿಸಲಾಗಿದೆ. ಸಂಘಟನೆಯ ಸಂಬಂಧವೊಇ ಅಥವಾ ವೈಯಕ್ತಿಕ ಕಾರಣವೋ ಎಂಬುದರ ಬಗ್ಗೆ ತನಿಖೆ ತೀವ್ರಗೊಳಿಸಲಾಗಿದೆ. ನಾಲ್ಕು ತಂಡಗಳನ್ನು ರಚಿಸಲಾಗಿದೆ. ಹಮನತಕರ ಬಂಧನಕ್ಕೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.