ಸಿಎಂ ಯೋಗಿ ಅವ್ರೇ ಥಿಯೇಟರ್ನಲ್ಲಿ ಪಾಪ್ಕಾರ್ನ್ ಬೆಲೆ ಕಡಿಮೆ ಮಾಡಿ; ನಟ ಜಾಕಿ ಶ್ರಾಫ್ ಮನವಿ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂಬೈ ಪ್ರವಾಸದಲ್ಲಿದ್ದಾರೆ. ಈ ವೇಳೆ ಬಾಲಿವುಡ್ ನಟ ಸುನೀಲ್ ಶೆಟ್ಟಿ. ಮನೋಜ್ ಜೋಶಿ, ಕೈಲಾಶ್ ಖೇರ್, ಸೋನು ನಿಗಮ್, ಬೋನಿ ಕಪೂರ್ ಮತ್ತು ಜಾಕಿ ಶ್ರಾಫ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳನ್ನು ಭೇಟಿಯಾದರು. ಸಭೆಯಲ್ಲಿ ಜಾಕಿ ಶ್ರಾಫ್ ಅವರು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ತಮ್ಮದೇ ಶೈಲಿಯಲ್ಲಿ ಸ್ವಾಗತಿಸಿದ್ದಾರೆ. ಬಳಿಕ ಮಾತಾಡಿದ ಜಾಕಿ ಶ್ರಾಫ್ ಸಿನಿಮಾ ಹಾಲ್ಗಳಲ್ಲಿ ಪಾಪ್ಕಾರ್ನ್ ಬೆಲೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿದರು.
ಜಾಕಿ ಶ್ರಾಫ್ ಅವರು ಈವೆಂಟ್ನ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ಸಿನಿಮಾ ರೂಲ್ಸ್ ಹಾಗೂ ಫಿಲ್ಮ್ ಸಿಟಿ ಬಗ್ಗೆ ತಿಳಿದು ಸಂತೋಷವಾಯ್ತು ಎಂದು ತಮ್ಮ ಪೋಸ್ಟ್ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ.