ವಿಮಾನದಲ್ಲಿ ಧೂಮಪಾನ ಮಾಡಿದ ಆರೋಪ ; ಕೇರಳದ ವ್ಯಕ್ತಿ ಬಂಧನ

ಕೊಚ್ಚಿ( ಕೇರಳ): ಜ.29 ರಂದು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಖಾಸಗಿ ಏರ್‌ಲೈನ್ಸ್‌ನ ಶೌಚಾಲಯದೊಳಗೆ ಧೂಮಪಾನ ಮಾಡುತ್ತಿದ್ದ ಆರೋಪದ ಮೇಲೆ ಕೇರಳದ 62 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ತ್ರಿಶೂರ್ ನಿವಾಸಿ ಸುಕುಮಾರನ್ ವಿರುದ್ಧ ವಿಮಾನ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜ. 29 ರಂದು ಪ್ರಕರಣ ದಾಖಲಾಗಿದ್ದು, ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ವಿಮಾನದ ಹಾರಾಟದ ಸಮಯದಲ್ಲಿ ಸ್ಪೈಸ್‌ಜೆಟ್ ಏರ್‌ವೇಸ್‌ನ ಶೌಚಾಲಯದೊಳಗೆ ವ್ಯಕ್ತಿ ಧೂಮಪಾನ ಮಾಡುತ್ತಿರುವುದು ಕಂಡುಬಂದಿದೆ. ಸಿಬ್ಬಂದಿ ಆತನನ್ನು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ ಎನ್ನಲಾಗುತ್ತಿದೆ.