ಮತ್ತೆ ಮುನ್ನೆಲೆಗೆ ಬಂದ ಸಚಿವ ಸಂಪುಟ ವಿಸ್ತರಣೆ ವಿಚಾರ: ಕುತೂಹಲ ಮೂಡಿಸಿದ RSS ಮುಖಂಡರ ಸಿಎಂ ಭೇಟಿ

ಮತ್ತೆ ಮುನ್ನೆಲೆಗೆ ಬಂದ ಸಚಿವ ಸಂಪುಟ ವಿಸ್ತರಣೆ ವಿಚಾರ: ಕುತೂಹಲ ಮೂಡಿಸಿದ RSS ಮುಖಂಡರ ಸಿಎಂ ಭೇಟಿ

ಬೆಂಗಳೂರು: ರಾಜ್ಯದಲ್ಲಿ ಬಾಕಿ ಇರುವಂತ ಸಚಿವ ಸ್ಥಾನ ಹಂಚಿಕೆ ಸಂಬಂಧ ಈಗ ಮತ್ತೆ ಸಚಿವ ಸಂಪುಟ ವಿಸ್ತರಣೆ ವಿಚಾರವು ಮುನ್ನೆಲೆಗೆ ಬಂದಿದೆ. ಅದರಲ್ಲೂ ಆರ್ ಎಸ್ ಎಸ್ ಮುಖಂಡರು ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿದ್ದು ಮತ್ತಷ್ಟು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಡಿಸೆಂಬರ್ 7ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಆರ್ ಎಸ್ ಎಸ್ ಸಹ ಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ ಭೇಟಿಯಾಗಿದ್ದರು. ಈ ಬಳಿಕ ನಿನ್ನೆ ಸಿ ಆರ್ ಮುಕುಂದ್ ಅವರು ಕೂಡ ಭೇಟಿಯಾಗಿದ್ದಾರೆ.

ಈ ಎಲ್ಲಾ ಕಾರಣದಿಂದಾಗಿ ಮತ್ತೆ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಚುರುಕು ಪಡೆದಿದೆ ಎನ್ನಲಾಗುತ್ತಿದೆ. ಅಲ್ಲದೇ ಸಚಿವ ಸಂಪುಟದಲ್ಲಿ ಸಂಘ ಪರಿವಾರದವರಿಗೆ ಸ್ಥಾನ ನೀಡುವ ಕುರಿತಂತೆಯೂ ಚರ್ಚೆ ನಡೆಸಲಾಗಿದೆ ಎನ್ನಲಾಗುತ್ತಿದೆ.

ಇನ್ನೂ ಆರ್ ಎಸ್ ಎಸ್ ಮುಖಂಡರ ಭೇಟಿಯ ಬಳಿಕ ಚುರುಕಾಗಿರುವಂತ ಬಿಜೆಪಿ, ಸಂಪುಟ ವಿಸ್ತರಣೆಯ ಕಸರತ್ತು ನಡೆಸಲಿದೆ ಎಂದು ಹೇಳಲಾಗುತ್ತಿದೆ. ಯಾವಾಗ ಬೊಮ್ಮಾಯಿ ಅವರ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.