ರೈಲ್ವೆ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌

ರೈಲ್ವೆ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌

ತುಮಕೂರು-ದಾವಣಗೆರೆ, ತುಮಕೂರು-ರಾಯದುರ್ಗ & ತುಮಕೂರು-ಕೊರಟಗೆರೆ ರೈಲ್ವೆ ಮಾರ್ಗಗಳ ಕೆಲಸ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ರಾಯದುರ್ಗ ಮಾರ್ಗದ ತುಮಕೂರು-ಕೊರಟಗೆರೆ ಭಾಗದ ಕಾಮಗಾರಿಗೆ 270.31 ಕೋಟಿ ರೂ. ಟೆಂಡರ್‌ ಅಂದಾಜಿಸಲಾಗಿದೆ. 191 ಕಿ.ಮೀ. ಉದ್ದದ ತುಮಕೂರು-ದಾವಣಗೆರೆ ಮಾರ್ಗಕ್ಕೆ 2011-12ರಲ್ಲಿ ಅನುಮೋದನೆ ಸಿಕ್ಕಿತ್ತು. ರಾಯದುರ್ಗ ಮಾರ್ಗಕ್ಕೆ 2007-08ರ ಹಿಂದೆಯೇ ಅನುಮೋದನೆ ಸಿಕ್ಕಿತ್ತು. ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾದ ಕಾರಣ 2 ಯೋಜನೆಗಳು ಬಾಕಿ ಉಳಿದಿವೆ.