ಮೃತದೇಹ ಆಸ್ಪತ್ರೆಗೆ ಸಾಗಿಸಿದ ಹೆಡ್ ಕಾನ್‌ಸ್ಟೇಬಲ್‌ಗೆ ಅಭಿನಂದನೆ

ಮಂಗಳೂರು: ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಸಂಪತ್ ಬಂಗೇರ ಅವರು ಬುಧವಾರ ಕರ್ತವ್ಯದಲ್ಲಿದ್ದ ವೇಳೆ ಕಣ್ಣಿಗೆ ಬಿದ್ದ ಅಪರಿಚಿತ ಮೃತದೇಹವೊಂದನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಸಂಪತ್ ಬಂಗೇರ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಪ್ರಶಂಸಾಪತ್ರ ನೀಡಿ ಅಭಿನಂದಿಸಿದರು.
ನಗರದ ಮಿನಿ ವಿಧಾನದ ಸೌಧದ ಎದುರು ಅಪರಿಚಿತ ವ್ಯಕ್ತಿಯ ಮೃತದೇಹ ಬಿದ್ದಿರುವುದನ್ನು ಗಮನಿಸಿದ ಸಂಪತ್ ಅವರು, ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಬರುವುದನ್ನು ಕಾಯದೆ, ಸಹೋದ್ಯೋಗಿಗಳ ನೆರವು ಪಡೆದು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಗುರುವಾರ ಕಮಿಷನರ್ ಕಚೇರಿಯಲ್ಲಿ ಅವರನ್ನು ಅಭಿನಂದಿಸಿದ, ಎನ್. ಶಶಿಕುಮಾರ್ ಅವರು, ಈ ಕರ್ತವ್ಯ ಪ್ರಜ್ಞೆ ಇತರರಿಗೆ ಮಾದರಿಯಾಗಲಿ ಎಂದರು.