ನೂತನ ಕುಲಪತಿಯಾಗಿ ಪ್ರೊ.ಶರಣಪ್ಪ ವೈದ್ಯನಾಥ್ ಹಲ್ಲೆ ನೇಮಕ

ಬೆಂಗಳೂರು: ಡಾ.ಎಸ್ ವಿದ್ಯಾಶಂಕರ್ ಅವರ ರಾಜೀನಾಮೆಯಿಂದ ತೆರವಾಗಿದ್ದಂತ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ( Karnataka State Open University - KSOU ) ನೂತನ ಕುಲಪತಿಯಾಗಿ ಪ್ರೊ.ಶರಣಪ್ಪ ವೈದ್ಯನಾಥ ಹಲ್ಸೆ ಅವರನ್ನು ರಾಜ್ಯ ಸರ್ಕಾರ ( Karnataka Government ) ನೇಮಿಸಿದೆ.ಈ ಸಂಬಂಧ ಅಧಿಸೂಚನೆ ಹೊರಡಿಸಿರುವಂತ ರಾಜ್ಯಪಾಲರು, ಬೆಳಗಾವಿಯ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಯಾಗಿ ಡಾ.ಎಸ್ ವಿದ್ಯಾಶಂಕರ್ ನೇಮಕಗೊಂಡಿದ್ದರು. ಹೀಗಾಗಿ ಕೆ ಎಸ್ ಓ ಯು ಕುಲಪತಿಯಾಗಿದ್ದಂತ ಅವರು ದಿನಾಂಕ 29-09-2022ರಂದು ರಾಜೀನಾಮೆ ನೀಡಿದ್ದರು. ಹೀಗಾಗಿ ಕೆ ಎಸ್ ಓಯು ಕುಲಪತಿ ಹುದ್ದೆ ಖಾಲಿ ಉಳಿದಿತ್ತು ಎಂದಿದ್ದಾರೆ.ಇನ್ನೂ ಕುಲಪತಿ ಆಯ್ಕೆಗಾಗಿ ಸಮಿತಿಯ ಸಮಿತಿಯ ಶಿಫಾರಸ್ಸು ಆಧರಿಸಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು ಇದರ ನೂತನ ಕುಲಪತಿಯನ್ನಾಗಿ ಪ್ರೊ.ಶರಣಪ್ಪ ವೈದ್ಯನಾಥ ಹಲ್ಸೆ ಅವರನ್ನು ನೇಮಕ ಮಾಡಿ ಆದೇಶಿಸಿದ್ದಾರೆ.