ಭದ್ರಾ ಅಭಯಾರಣ್ಯದಲ್ಲಿ ಕಟ್ಟಡ ನಿರ್ಮಾಣದಿಂದ ವನ್ಯಸಂಪತ್ತಿಗೆ ಆಪತ್ತು

ಭದ್ರಾ ಅಭಯಾರಣ್ಯದಲ್ಲಿ ಕಟ್ಟಡ ನಿರ್ಮಾಣದಿಂದ ವನ್ಯಸಂಪತ್ತಿಗೆ ಆಪತ್ತು

ಚಿಕ್ಕಮಗಳೂರು: ರಾಜ್ಯದ ಹೆಸರಾಂತ ಹಾಗೂ ವನ್ಯಪ್ರಾಣಿಗಳ ಅತ್ಯಂತ ವಿಶೇಷ ಅಭಯಾರಣ್ಯವಾದ ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಈಗ ಅ

ಅನಿಯಂತ್ರಿತ ಸಿವಿಲ್ ಕಾಮಗಾರಿಗಳಿಂದ ಪ್ರಶಾಂತತೆಯನ್ನು ಕಳೆದುಕೊಳ್ಳುವುದರ ಜೊತೆಗೆ ವನ್ಯಪ್ರಾಣಿಗಳ ಬದುಕಿಗೂ ಸಮಸ್ಯೆ ಉಂಟು ಮಾಡುತ್ತಿದೆ.

ಭದ್ರಾ ಅಭಯಾರಣ್ಯ ರೂಪುಗೊಳ್ಳಲು ಆರಂಭವಾಗಿದ್ದು ೧೯೧೬ ರಲ್ಲಿ. ಆಂಗ್ಲರ ಕಾಲದಲ್ಲೇ ವನ್ಯಪ್ರಾಣಿಗಳ ಬಾಹುಳ್ಯದ ಮೆರುಗನ್ನು ಹೊಂದಿದ್ದು ರಕ್ಷಿತಾರಣ್ಯವೆಂದು ಘೋಷಿತವಾಗಿತ್ತು. ಪಶ್ಚಿಮಘಟ್ಟದ ಬೆಟ್ಟ ಸಾಲುಗಳ ಮಧ್ಯದಲ್ಲಿಉತ್ತಮ ನೀರಿನ ಹರಿವನ್ನು ಹೊಂದಿರುವ ಈ ಪ್ರದೇಶ ವಾಯುಗುಣದಿಂದಲೂ ಯಂತ್ರಿತವಾಗಿ ಸಸ್ಯಗಳ ಪರಾಕಾಷ್ಠ ಸ್ಥಿತಿಗೂ ಕಾರಣವಾಗಿ ೧೯೫೨ ರಲ್ಲಿ ಜಾಗರಕಣಿವೆ ವನ್ಯಪ್ರಾಣಿಗಳ ಮೀಸಲು ತಾಣವಾಗಿದ್ದು, ಅನಂತರ ೧೯೭೪ರಲ್ಲಿ ಕೇಂದ್ರ ಸರ್ಕಾರಒಟ್ಟು ೪೯೭ ಚದರ ಕಿ.ಮೀ. ಪ್ರದೇಶವನ್ನು ಭದ್ರಾ ಅಭಯಾರಣ್ಯವೆಂದು ಘೋಷಿಸಿತು. ಹುಲಿಗಳಿಗೂ ಸೂಕ್ತ ಆವಾಸ ಸ್ಥಾನವಾಗಿದ್ದ ಹಿನ್ನೆಲೆಯಲ್ಲಿ ಈ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು.ಈ ಅಭಯಾರಣ್ಯದ ಪ್ರಾಮುಖ್ಯತೆಯನ್ನರಿತು ಹಾಗೂ ಅಭಯಾರಣ್ಯದೊಳಗಿದ್ದ ೧೩ ಹಳ್ಳಿಗಳ ವಾಸಿಗಳು ಸ್ವಯಂ ಇಚ್ಛೆಯಿಂದ ಹೊರ ಬಂದ ಹಿನ್ನೆಲೆಯಲ್ಲಿ ದೇಶದಲ್ಲೇ ಒಂದು ಮಾದರಿ ಸ್ಥಳಾಂತರ ಯೋಜನೆ ಎಂದು ಪ್ರಸಿದ್ಧಿ ಪಡೆಯಿತು.

ಮಾರ್ಗಸೂಚಿ ಕಡೆಗಣಿಸಿ ಕಟ್ಟಡ ನಿರ್ಮಾಣ: ಈ ವಿಶೇಷತೆಗಳನ್ನು ಹೊಂದಿರುವ ಭದ್ರಾ ಅಭಯಾರಣ್ಯದಲ್ಲಿ ಈಗ ಯಂತ್ರಗಳ ಸದ್ದು ಆಗಾಗ ಮೊಳಗುತ್ತಿವೆ. ಕಟ್ಟಡಗಳು ತಲೆ ಎತ್ತುತ್ತಿವೆ. ಅಭಯಾರಣ್ಯದ ಹೊರಭಾಗದಲ್ಲಿ ಮಾತ್ರ ಮಾಡಲು ನ್ಯಾಯಾಲಯ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಆದೇಶಿಸಿ ಮಾರ್ಗದರ್ಶಿ ಸೂತ್ರ ಮಾಡಿದ್ದರೂ ಅದನ್ನು ಕಡೆಗಣಿಸಲಾಗಿದೆ.

ಅಭಯಾರಣ್ಯದೊಳಗೆ ಹೊಸದಾಗಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಸಿಬ್ಬಂದಿ ವಸತಿಗೃಹಗಳನ್ನು ಅಭಯಾರಣ್ಯದ ಅಂಚಿನಲ್ಲಿ ನಿರ್ಮಿಸದೆ ಒಳಗೆ ಅವುಗಳು ತಲೆಯೆತ್ತುತ್ತಿವೆ. ಈ ಅಭಯಾರಣ್ಯ ಕೇವಲ ಹುಲಿ ಸಂರಕ್ಷಿತ ಪ್ರದೇಶವಾಗಿರದೆ ಸಂದಿಗ್ಧ ಹುಲಿ ಸಂರಕ್ಷಿತ (ಕೋರ್‌ಕ್ರಿಟಿಕಲ್‌ಟೈಗರ್ ಹ್ಯಾಬಿಟೇಟ್) ಪ್ರದೇಶವೆಂದು ಪರಿಗಣಿಸಲಾಗಿದೆ. ಅಭಯಾರಣ್ಯದೊಳಗೆ ಮಳೆ ನೀರು ಸರಾಗವಾಗಿ ಸಾಗಲು ನಿರ್ಮಿಸಿರುವ ಚರಂಡಿಗಳಂತೂ ಸಣ್ಣಪ್ರಾಣಿಗಳೂ ದಾಟಲು ಸಾಧ್ಯವಾಗದಂತಿವೆ.

ಪ್ರಾಣಿಹತ್ಯೆ ಆರೋಪ : ಇನ್ನುಅಭಯಾರಣ್ಯದ ಸಂರಕ್ಷಣೆ ವಿಚಾರಕ್ಕೆ ಬಂದರೆ ಬೇಟೆ ಗ್ರಹ ಶಿಬಿರಗಳು ನೆಪಮಾತ್ರಕ್ಕಿದ್ದು, ಸಿಬ್ಬಂದಿ ಕೊರತೆ ಕಾಡುತ್ತಿದೆ. ಇರುವ ಸಿಬ್ಬಂದಿಗಳಿಗೂ ಪ್ರತೀ ತಿಂಗಳು ದೊರಕದೆ ಪರದಾಡುವಂತಾಗಿದೆ. ಅರಣ್ಯ ರಕ್ಷಕರುಗಳ ಹುದ್ದೆಗಳನ್ನು ಈ ಪ್ರಮುಖ ಅಭಯಾರಣ್ಯ ರಕ್ಷಣೆಗೆ ಸೃಷ್ಟಿಸಿದ್ದರೂ ನೇಮಕವಾಗದೆ ಖಾಲಿ ಬಿದ್ದಿವೆ. ಈ ಅಭಯಾರಣ್ಯದಲ್ಲಿ ಹುಲಿಗಳ ಓಡಾಟವನ್ನು ಚಿತ್ರೀಕರಿಸುವ ಕ್ಯಾಮರಾಗಳು ಕಳ್ಳತನವಾಗಿದೆ. ಪುನರ್ವಸತಿ ಆದ ಗ್ರಾಮಗಳ ಪ್ರದೇಶದಲ್ಲಿ ಬೇಟೆ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಪ್ರದೇಶಗಳು ಜನರ ಸ್ಥಳಾಂತರದ ನಂತರ ಜಿಂಕೆಗಳಿಂದ ತುಂಬಿತ್ತು. ಈಗ ಅಲ್ಲಿ ಅವುಗಳ ಓಡಾಟ ಕ್ಷೀಣಿಸಿದೆ.

ಅಭಯಾರಣ್ಯಕ್ಕೆ ಸೇರಿದ ಲಕ್ಕವಳ್ಳಿ ಹಾಗೂ ಹೆಬ್ಬೆ ವಲಯದ ಹಿರಿನಲ್ಲಿ ದೋಣಿಗಸ್ತನ್ನು ಕೈಗೊಳ್ಳುವುದು ಅತ್ಯಂತ ಅವಶ್ಯಕ. ಆದರೆ ಆ ರೀತಿಗಸ್ತನ್ನು ನಡೆಸುತ್ತಿಲ್ಲವೆಂದು ಸ್ಥಳೀಯ ಪ್ರಕೃತಿ ಪ್ರೇಮಿಗಳು ದೂರುತ್ತಾರೆ. ಅಭಯಾರಣ್ಯವನ್ನು ಹೊರತು ಪಡಿಸಿ ಭದ್ರಾ ನದಿ ಹಾಗೂ ಹಿರಿನಲ್ಲಿ ಮೀನು ಹಿಡಿಯಲು ೭೬ ದೋಣಿಗಳಿಗೆ ಮಾತ್ರ ಅನುಮತಿ ಇದೆ. ಆದರೆ ಆ ಸಂಖ್ಯೆ ೨೦೦ ಕ್ಕಿಂತ ಜಾಸ್ತಿಯಾಗಿದೆ. ಈ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಮೀನು ಹಿಡಿಯುವ ಮಂದಿ ಅಭಯಾರಣ್ಯದೊಳಗೆ ರಾತ್ರಿ ಕಳೆಯುವ ಪರಿಪಾಠ ಮತ್ತೆಆರಂಭವಾಗಿದ್ದು, ಇದು ಕೆಲವು ಜಲಚರಗಳು ಹಾಗೂ ಮರಗಳ್ಳತನಕ್ಕೂ ಅವಕಾಶವಾಗುವ ಅಪಾಯವಿದೆ.

ನಿಯಂತ್ರಣವಿಲ್ಲದ ಪ್ರವಾಸೋದ್ಯಮ ಪ್ರಾಣಿಗಳ ನಿರಾತಂಕ ಬದುಕಿಗೆ ತೊಡಕಾಗುವ ಲಕ್ಷಣಗಳು ಕಾಣುತ್ತಿದ್ದು, ಈ ಪ್ರದೇಶದ ತಾಳಿಕೆ ಸಾಮರ್ಥ್ಯಕ್ಕೆಅನುಗುಣವಾಗಿ ಪ್ರವಾಸಿಗರ ಸಂಖ್ಯೆಯನ್ನು ಯಂತ್ರಿಸಬೇಕಾಗಿದೆ. ಈ ಎಲ್ಲಾ ಲೋಪ ಹಾಗೂ ಕೊರತೆಗಳ ನಿವಾರಣೆಗೆ ಅಭಯಾರಣ್ಯದ ಅಧಿಕಾರಿಗಳು ತಕ್ಷಣ ಗಮನ ಹರಿಸಿ ವಾರಿಸಬೇಕೆಂದು ಒತ್ತಾಯಿಸಲಾಗಿದೆ.