ಬೆಂಗಳೂರು 'ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ' : ಜ.26ಕ್ಕೆ 'ಮೆಟ್ರೋ ಪ್ರಯಾಣಿಕರಿಗೆ ಪೇಪರ್ ಟಿಕೆಟ್'
ಬೆಂಗಳೂರು : ಗಣರಾಜ್ಯೋತ್ಸವ ಪ್ರಯುಕ್ತ ರಾಜ್ಯ ತೋಟಗಾರಿಕೆ ಇಲಾಖೆಯು ಬೆಂಗಳೂರಿನ ಲಾಲ್‌ಬಾಗ್ ಉದ್ಯಾನದಲ್ಲಿ ನಡೆಯುವ ʻಫಲಪುಷ್ಪ ಪ್ರದರ್ಶನ' ವೀಕ್ಷಣೆಗೆ ಬರುವ ಜನರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಪೇಪರ್ ಟಿಕೆಟ್ ಪರಿಚಯಿಸಿದೆ.
ರಾಜ್ಯ ತೋಟಗಾರಿಕೆ ಇಲಾಖೆಯು ಬೆಂಗಳೂರಿನ ಲಾಲ್‌ಬಾಗ್ ಉದ್ಯಾನದಲ್ಲಿ ಜನವರಿ 20ರಿಂದ 31ರವರೆಗೆ ಹನ್ನೊಂದು ದಿನಗಳ ಕಾಲ 'ಫಲಪುಷ್ಪ ಪ್ರದರ್ಶನ' ನಡೆಸುತ್ತಿದೆ. ಸುಮಾರು 15ಲಕ್ಷಕ್ಕೂ ಹೆಚ್ಚು ಮಂದಿ ಉದ್ಯಾನಕ್ಕೆ ಬರುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಅಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 08 ಗಂಟೆವರೆಗೆ ಲಾಲ್ ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು 30ರೂ. ನೀಡಿ ಪೇಪರ್ ಟಿಕೆಟ್ ಪಡೆದು ಸಂಚರಿಸಬಹುದಾಗಿದೆ.
ಈ ವ್ಯವಸ್ಥೆ ಸದರಿ ದಿನ ಮಾತ್ರ ಮಾನ್ಯವಾಗಿರುತ್ತದೆ. ಜೊತೆಗೆ ಬೆಳಗ್ಗೆ 08 ಗಂಟೆಯಿಂದ ಸಂಜೆ 06 ಗಂಟೆವರೆಗೆ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಈ ಪೇಪರ್ ಟಿಕೆಟ್ ಖರೀದಿಸಬಹುದಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರೋ ಪ್ರಯಾಣಿಕರು ಲಾಲ್ ಬಾಗ್ ನಿಲ್ದಾಣದ ಎಎಫ್‌ಸಿ ಗೇಟ್ ಪ್ರವೇಶಿಸಲು ಮತ್ತು ಯಾವುದೇ ನಿಲ್ದಾಣದಿಂದ ನಿರ್ಗಮಿಸಲು ಈ ಪೇಪರ್ ಟಿಕೆಟ್ ಹಾಜರುಪಡಿಸುವುದು ಕಡ್ಡಾಯವಾಗಿರುತ್ತದೆ. ಸಾರ್ವಜನಿಕರು ಈ ಸೇವೆಯ ಸದುಪರಯೋಗ ಮಾಡಿಕೊಳ್ಳುವಂತೆ ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.