ಅಪ್ರಾಪ್ತೆ' ಎಂಬ ಒಂದೇ ಕಾರಣಕ್ಕೆ ವಿವಾಹ ಅನೂರ್ಜಿತವಾಗಲ್ಲ : ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು : ಅಪ್ರಾಪ್ತೆ ಎಂಬ ಒಂದೇ ಕಾರಣಕ್ಕೆ ವಿವಾಹ ಅನೂರ್ಜಿತವಾಗುವುದಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಆದೇಶ ಹೊರಡಿಸಿದೆ.
ಪತಿ ತನ್ನ ಪತ್ನಿಯೊಂದಿಗಿನ ವಿವಾಹ ಅನೂರ್ಜಿಗೊಳಿಸಲು ಅರ್ಜಿ ಸಲ್ಲಿಸಿದ್ದ, ವಿವಾಹವಾದಾಗ ಪತ್ನಿಗೆ ವಯಸ್ಸು 16 ವರ್ಷ 11 ತಿಂಗಳಾಗಿತ್ತು, ಹಿಂದೂ ವಿವಾಹ ಕಾಯಿದೆಯಡಿ ಯುವತಿಗೆ 18 ವರ್ಷ, ಯುವಕನಿಗೆ 21 ವರ್ಷ ವಯಸ್ಸಾಗಿರಬೇಕು.
ಈ ಹಿನ್ನೆಲೆ ವಿಚಾರಣೆ ನಡೆಸಿದ ಹೈಕೋರ್ಟ್ ಹಿಂದೂ ವಿವಾದ ಕಾಯಿದೆಯ ಸೆಕ್ಷನ್ 11 ರಡಿ ಅನೂರ್ಜಿತವಾಗುವುದಿಲ್ಲ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಅಪ್ರಾಪ್ತೆಯೊಂದಿಗಿನ ವಿವಾಹವನ್ನು ಸೆ.11 ರ ವ್ಯಾಪ್ತಿಯಿಂದ ಕೈ ಬಿಡಲಾಗಿದೆ, ಅಪ್ರಾಪ್ತೆ ಎಂಬ ಒಂದೇ ಕಾರಣಕ್ಕೆ ವಿವಾಹ ಅನೂರ್ಜಿತವಾಗುವುದಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಆದೇಶ ಹೊರಡಿಸಿದೆ.