ರಾಜ್ಯದಲ್ಲಿ ಇನ್ಮುಂದೆ ವೋಟ್​ ಬ್ಯಾಂಕ್​ ರಾಜಕಾರಣ ನಡೆಯಲ್ಲ; ಎಸ್ಸಿ, ಎಸ್ಟಿ ಜನರು ಬುದ್ದಿವಂತರಾಗಿದ್ದಾರೆ; ಸಿಎಂ ಬೊಮ್ಮಾಯಿ

ರಾಜ್ಯದಲ್ಲಿ ಇನ್ಮುಂದೆ ವೋಟ್​ ಬ್ಯಾಂಕ್​ ರಾಜಕಾರಣ ನಡೆಯಲ್ಲ; ಎಸ್ಸಿ, ಎಸ್ಟಿ ಜನರು ಬುದ್ದಿವಂತರಾಗಿದ್ದಾರೆ; ಸಿಎಂ ಬೊಮ್ಮಾಯಿ

ಹಾವೇರಿ: ರಾಜ್ಯದಲ್ಲಿ ಇನ್ಮುಂದೆ ವೋಟ್​ ಬ್ಯಾಂಕ್​ ರಾಜಕಾರಣ ನಡೆಯಲ್ಲ, ಎಸ್ಸಿ, ಎಸ್ಟಿ ಜನರು ತುಂಬಾ ಬುದ್ದಿವಂತರಾಗಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಯಾರ ಅಧಿಕಾರ ಅವಧಿಯಲ್ಲಿ ಎಷ್ಟು ಕೆಲಸವಾಗಿದೆ ಎಂದು ಎಲ್ಲರಿಗೂ ಗೊತ್ತಿದೆ.

ಅವರ ಸಂಖ್ಯೆ ಕೂಡ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಬೇಡಿಕೆಯೂ ಹೆಚ್ಚಾಗಿದೆ. ಹಾಗಾಗಿ ಮೀಸಲಾತಿ ಹೆಚ್ಚಿಸಿದ್ದೇವೆ. ವಿರೋಧ ಪಕ್ಷದವರ ಕೆಲಸ ಟೀಕೆ ಮಾಡುವುದಾಗಿ ಎಂದು ಹೇಳಿದ್ದಾರೆ.ಇದೇ ವೇಳೆ, ಬೆಳಗಾವಿಯಲ್ಲಿ ಶ್ರೀರಾಮಸೇನೆ ಅಧ್ಯಕ್ಷ ರವಿ ಮೇಲೆ ಫೈರಿಂಗ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು,ನಮ್ಮಲ್ಲಿ ಅಭಿಪ್ರಾಯ ಭೇದ ಇರಬಹುದು, ಆದರೆ ಹಿಂಸೆ ಒಪ್ಪುವುದಿಲ್ಲ. ಕೂಡಲೇ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಸೂಚನೆ ನೀಡಿದ್ದೇನೆ. ಯಾರನ್ನೇ ಆದರೂ ಕೊಲ್ಲುವ ಕೆಲಸಕ್ಕೆ ಮುಂದಾಗಬಾರದು. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತೆ. ಶ್ರೀರಾಮಸೇನೆಯ ರವಿ, ಚಾಲಕನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೇವೆ ಎಂದರು.