ಉತ್ತರಕನ್ನಡ ಜಿಲ್ಲೆಯಲ್ಲಿ ವಸತಿ ಹಾಸ್ಟೆಲ್ ನಲ್ಲಿ ಸ್ವಚ್ಛತೆ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ಚರ್ಮರೋಗ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಪಾಳ ಗ್ರಾಮದ ಸಮಾಜಕಲ್ಯಾಣ ಇಲಾಖೆಯ ಇಂದಿರಾಗಾಂಧಿ ವಸತಿ ಹಾಸ್ಟೆಲ್ ನಲ್ಲಿ ಸ್ವಚ್ಛತೆ ಇರದ ಕಾರಣಕ್ಕೆ 15ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಚರ್ಮರೋಗ ಕಾಣಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಆಡಳಿತವರ್ಗವನ್ನು ಪೋಷಕರು ತರಾಟೆ ತೆಗೆದುಕೊಂಡಿದ್ದಾರೆ.
ಆದರೆ ಸಂಬಂಧಿಸಿದ ಅಧಿಕಾರಿಗಳು ಈ ವಿದ್ಯಾರ್ಥಿಗಳನ್ನು ವೈದ್ಯರಿಗೆ ತೋರಿಸದೇ ಅಸಡ್ಡೆ ಮಾಡಿದ್ದು, ಮತ್ತಷ್ಟು ವಿದ್ಯಾರ್ಥಿಗಳಿಗೆ ಚರ್ಮರೋಗ ಕಾಣಿಸಿಕೊಂಡಿದೆ. ಇಂದು ಪೋಷಕರು ಹಾಸ್ಟೆಲ್‍ಗೆ ಆಗಮಿಸಿ ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.