ಬೆಂಗಳೂರಿನಲ್ಲಿ ಲಯಸ್ಮಿತಾ ಕೊಲೆ ಪ್ರಕರಣ: ಪೊಲೀಸ್ ಇಲಾಖೆಯಿಂದ ಕಾಲೇಜುಗಳಿಗೆ ಹೊಸ ಗೈಡ್ ಲೈನ್ಸ್
ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜುಯೊಂದರಲ್ಲಿ ನಡೆದ ವಿದ್ಯಾರ್ಥಿನಿ ಲಯಸ್ಮಿತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದಾರೆ.
ಹೀಗಾಗಿ ಬೆಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಗಳಲ್ಲಿ ಬರುವ ಎಲ್ಲಾ ಕಾಲೇಜುಗಳಿಗೆ ಹೊಸ ಗೈಡ್ ಲೈನ್ ಹೊರಡಿಸಿದೆ.ಕಾಲೇಜು ಆಡಳಿತ ಮಂಡಳಿಗಳು ಇನ್ಮುಂದೆ ಈ ಹೊಸ ಗೈಡ್ ಲೈನ್ಸ್ ಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಪೊಲೀಸರು ತಾಕೀತು ಮಾಡಿದ್ದಾರೆ.ಮತ್ತೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ಪೊಲೀಸರು ಹೊಸ ಗೈಡ್ ಲೈನ್ಸ್ ಹೊರಡಿಸಿದೆ. ಹಾಗಾದ್ರೆ ಹೊಸ ಗೈಡ್ಸ್ ಲೈನ್ಸ್ ನಲ್ಲಿ ಏನಿದೆ ಅನ್ನೋದು ಮಾಹಿತಿ ಇಲ್ಲಿದೆ.
ಕಾಲೇಜು ಅವರಣದಲ್ಲಿ, ಪಾರ್ಕಿಂಗ್ ಲಾಟ್‍ನಲ್ಲಿ ಸಿಸಿಟಿವಿ ಕಡ್ಡಾಯವಾಗಿರಬೇಕು. ಹೊರಗಡೆಯಿಂದ ಬೈಕ್‍ನಲ್ಲಿ ಬರುವವರನ್ನ ಪರಿಶೀಲಿಸಬೇಕು. ಎಂಟ್ರಿ-ಎಕ್ಸಿಟ್ ಗೇಟ್‍ನಲ್ಲಿ ಭದ್ರತೆಯನ್ನ ಹೆಚ್ಚಿಸಿ ಕೊಡಬೇಕು. ಐಡಿ ಕಾರ್ಡ್ ಇರದೇ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಾರದು. ಗಲಾಟೆ ಸಂದರ್ಭ ಎದುರಾದರೆ ಪೊಲೀಸರಿಗೆ ತಿಳಿಸಬೇಕು. ಇಷ್ಟಲ್ಲದೇ ವಿದ್ಯಾರ್ಥಿಗಳ ರಕ್ಷಣೆಗೆ ಪೊಲೀಸರು ಕೂಡ ಪಬ್ಲಿಕ್ ಸೆಪ್ಟಿ ಆಕ್ಟ್ ಅಡಿಯಲ್ಲಿ ಸೂಕ್ತ ಭದ್ರತೆಗೆ ಸಿದ್ಧಮಾಡಿಕೊಂಡಿದ್ದಾರೆ.