ಬದಲಾಗದ ಚಿನ್ನದ ದರ, ಬೆಳ್ಳಿ ದರ ತುಸು ಇಳಿಕೆ

ಬದಲಾಗದ ಚಿನ್ನದ ದರ, ಬೆಳ್ಳಿ ದರ ತುಸು ಇಳಿಕೆ

ಗೋಲ್ಡ್ ಫ್ಯೂಚರ್ಸ್ ದರದಲ್ಲಿ ತುಸು ಇಳಿಕೆಯಾಗಿರುವುದು ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ದರದ ಮೇಲೂ ಪರಿಣಾಮ ಬೀರಿದೆ. ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 52,200 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 56,950 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 400 ರೂ. ಇಳಿಕೆಯಾಗಿ 72,500 ರೂ. ಆಗಿದೆ. ಬೆಂಗಳೂರಿನಲ್ಲಿ 1 ಕೆಜಿ ಚಿನ್ನದ ದರ ಇಂದು 75,300 ರೂ. ಇದೆ.