ಪಾಕಿಸ್ತಾನದಲ್ಲಿ ಅವಘಡ; 20 ಮಂದಿ ಸಾವು

ಪಾಕಿಸ್ತಾನದಲ್ಲಿ ಅವಘಡ; 20 ಮಂದಿ ಸಾವು

ಕರಾಚಿ: ಪ್ರವಾಹ ಪೀಡಿತ ಸಿಂಧ್ ಪ್ರಾಂತ್ಯದಲ್ಲಿ ವ್ಯಾನ್ ನೀರು ತುಂಬಿದ ಕಂದಕಕ್ಕೆ ಉರುಳಿ 12 ಮಕ್ಕಳು ಸೇರಿದಂತೆ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ. ಖೈರ್ ಪುರದ ಸೆಹ್ವಾನ್ ಶರೀಫ್ ದರ್ಗಾಕ್ಕೆ ವ್ಯಾನ್ ತೆರಳುತ್ತಿತ್ತು ಎನ್ನಲಾಗಿದೆ. ಅವಘಡದಲ್ಲಿ ಹಲವರಿಗೆ ಗಾಯಗಳಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.