ನಾನೇ ದೇವೆಗೌಡರ ಮನೆ ಬಾಗಿಲನ್ನ ದಡಾರಂತ ಕ್ಲೋಸ್ ಮಾಡಿಕೊಂಡು ಬಂದಿದ್ದೇನೆ: ಜಿಟಿಡಿ
ಮೈಸೂರು: ನನಗೇನ್ ಜೆಡಿಎಸ್ ಬಾಗಿಲು ಬಂದ್ ಮಾಡೋದು. ನಾನೇ ದೇವೆಗೌಡರ ಮನೆ ಬಾಗಿಲನ್ನ ದಡಾರಂತ ಕ್ಲೋಸ್ ಮಾಡಿಕೊಂಡು ಬಂದಿದ್ದೇನೆ ಎಂದು ಕುಮಾರಸ್ವಾಮಿಗೆ ಶಾಸಕ ಜಿ.ಟಿ.ದೇವೆಗೌಡ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದಿನಿಂದ ಬಾಗಿಲು ಹಾಕಿದ್ದರೋ, ತೆಗೆದಿದ್ದಾರೋ ನಾನ್ಯಾಕೆ ನೋಡಲಿ.
ಪರಿಷತ್ ಫಲಿತಾಂಶ ಮೈಸೂರಿಗಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ಒಂದು ಹೊಸ ಶಕ್ತಿ ತುಂಬಲಿದೆ. ಬಹುಮತ ಪಡೆದ ಪಕ್ಷಕ್ಕೆ ಒಂದು ಹೊಸ ಚೈತನ್ಯ ತುಂಬಲಿದೆ. ಮೈಸೂರಿನಲ್ಲಿ ಎರಡು ಮತಗಳಿಗೆ ಅವಕಾಶವಿದೆ. ನಾನು ಮೊದಲ ಹಾಗೂ ಎರಡನೇ ಪ್ರಾಶಸ್ತ್ಯ ಮತ ಹಾಕಿದ್ದೇನೆ. ಯಾರಿಗೆ ಎಂಬುದನ್ನ ಬಹಿರಂಗಪಡಿಸಿದ್ರೆ, ಕಾನೂನು ಉಲ್ಲಂಘನೆ ಆಗುತ್ತೆ ಎಂದರು.